ತಿರುಚಿಯ ವಿದೇಶಿಸ್ಪೆಷಲ್‌ ಕ್ಯಾಂಪ್‌ ಮೇಲೆ ಎನ್‌ಐಎ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿರುಚ್ಚಿಯ ವಿಶೇಷ ಶಿಬಿರದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಅಲ್ಲಿ ವಿದೇಶಿ ಪ್ರಜೆಗಳು, ಹೆಚ್ಚಾಗಿ ಶ್ರೀಲಂಕಾದವರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿದ್ದಾರೆ. ಅಲ್ಲಿರುವ ಕೆಲ ಶ್ರೀಲಂಕಾ ಪ್ರಜೆಗಳ ವಿರುದ್ಧ ನಿರ್ದಿಷ್ಟ ಇನ್-ಪುಟ್‌(ಮಾಹಿತಿ) ಸಿಕ್ಕಿರುವುದರಿಂದ ಎನ್‌ಐಎ ಹುಡುಕಾಟಗಳನ್ನು ನಡೆಸಿದೆ.

ಎನ್‌ಐಎ ತನಿಖಾಧಿಕಾರಿಗಳು ಡ್ರಗ್ ಪೆಡ್ಲರ್‌ಗಳ ಅಂತರರಾಷ್ಟ್ರೀಯ ಸಂಪರ್ಕಗಳು, ಮೂಲಗಳು, ಪೂರೈಕೆ ಮತ್ತು ಸಾರಿಗೆ ಮಾರ್ಗಗಳನ್ನು ಪತ್ತೆಹಚ್ಚಿದ್ದು ಕೆಲವು ಶ್ರೀಲಂಕಾದ ಪ್ರಜೆಗಳು ನಿಷ್ಕ್ರಿಯಗೊಂಡಿರುವ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಅನ್ನು ಪುನರುಜ್ಜೀವನಗೊಳಿಸಲು ಹಣವನ್ನು ಸಂಗ್ರಹಿಸಲು ಮಾದಕವಸ್ತು ವ್ಯಾಪಾರ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಯುರೋಪ್‌ ನಲ್ಲೀ ನಿಧಿ ಸಂಗ್ರಹ ನಡೆಯುತ್ತಿರುವ ಕುರಿತು ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ವರದಿ ಮಾಡಿವೆ.

ಇದು ಅತ್ಯಂತ ಸೂಕ್ಷ್ಮ ಕಾರ್ಯಾಚರಣೆಯಾಗಿರುವುದರಿಂದ ಹೆಚ್ಚಿನ ಗೌಪ್ಯತೆ ಕಾಪಾಡಲಾಗಿದೆ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!