ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಕೆಂಪುದೀಪ ತೋರಿಸಿದೆ ರಷ್ಯ ಮೇಲಿನ ನಿರ್ಬಂಧ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯದ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಆ ದೇಶದ ಅರ್ಥವ್ಯವಸ್ಥೆಯನ್ನು ಹೇಗೆಲ್ಲ ಅಲುಗಾಡಿಸುತ್ತಿದೆ ಎಂಬ ವರದಿಗಳೇ ನಿಮಗೆ ಮಾಧ್ಯಮದಲ್ಲಿ ಹೆಚ್ಚು ಕಾಣಸಿಗುತ್ತವೆ. ಏಕೆಂದರೆ ನಾವು ಓದುತ್ತಿರುವ ಹೆಚ್ಚಿನ ವರದಿಗಾರಿಕೆಗಳೆಲ್ಲ ಪಾಶ್ಚಾತ್ಯ ಕನ್ನಡಕ ಹಾಕಿದವೇ.

ಆದರೆ, ಅಮೆರಿಕದ ರಷ್ಯ ವಿರುದ್ಧದ ನಿರ್ಬಂಧ ಜಗತ್ತಿನ ಅರ್ಥವ್ಯವಸ್ಥೆಗೆ ಹಲವು ವಿಧಗಳಲ್ಲಿ ಹೊಡೆತ ಕೊಟ್ಟಿದೆ. ಅವುಗಳಲ್ಲೊಂದು, ಜಗತ್ತು ಎಲೆಕ್ಟ್ರಿಕ್ ವಾಹನಗಳತ್ತ ತಿರುಗಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅದರ ವೇಗಕ್ಕೆ ತೊಡಕಾಗಿರುವ ವಿದ್ಯಮಾನ ಈ ರಷ್ಯದ ವಿರುದ್ಧದ ನಿರ್ಬಂಧ.

ನಿಕೆಲ್ ಲೋಹ ಲೀಥಿಯಂ ಆಧರಿತ ಬ್ಯಾಟರಿ ನಿರ್ಮಾಣದಲ್ಲಿ ಬೇಕಾಗುವ ಮುಖ್ಯವಸ್ತು. ಇದನ್ನು ಅತಿದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವುದು ರಷ್ಯ. ಇಂಥ ದೇಶದ ಶ್ರೀಮಂತರ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದಾಗ ಅದರಲ್ಲಿ ನಿಕೆಲ್ ರಫ್ತುದಾರರೂ ಸೇರಿದ್ದರು. ಹೀಗಾಗಿ ಕೆಲವೇ ದಿನಗಳಲ್ಲಿ ನಿಕೆಲ್ ಬೆಲೆ ಟನ್ನಿಗೆ ಡಾಲರ್ 10,000ದಿಂದ 30,000 ಡಾಲರಿಗೆ ಏರಿ ಕುಳಿತಿದೆ.

2030ರ ವೇಳೆಗೆ ಅಮೆರಿಕದಲ್ಲಿ ಶೇ 50ರಷ್ಟು ಎಲೆಕ್ಟ್ರಿಕ್ ವಾಹನಗಳೇ ಇರಬೇಕು ಅನ್ನೋದು ಬಿಡೆನ್ ನೀತಿ. ಟೆಸ್ಲಾದಂಥ ಎಲೆಕ್ಟ್ರಿಕ್ ಕಾರು ನಿರ್ಮಾಣದ ಕಂಪನಿಗಳೂ ಬ್ಯಾಟರಿ ಪೂರೈಕೆಯನ್ನು ಮುಖ್ಯವಾಗಿ ಅವಲಂಬಿಸಿವೆ. 2020-21ರ ನಡುವೆ ವಿಶ್ವದ ಮಟ್ಟದಲ್ಲಿ ಲೀಥಿಯಂ ಆಧರಿತ ಬ್ಯಾಟರಿಗೆ ಬೇಕಾಗುವ ನಿಕೆಲ್ ನ ಕೇವಲ ಶೇ 0.7 ಮಾತ್ರ ಅಮೆರಿಕ ಉತ್ಪಾದಿಸಿದೆ. ಇದಕ್ಕೆ ಹೋಲಿಸಿದರೆ ಶೇ. 10 ರಷ್ಯದಿಂದ ರಫ್ತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!