Thursday, August 11, 2022

Latest Posts

ಕೇರಳದಲ್ಲಿ ನಿಫಾ ವೈರಸ್: 11 ಮಂದಿಗೆ ಸೋಂಕಿನ ಲಕ್ಷಣ ಪತ್ತೆ, 251 ಜನರ ಜೊತೆ ಸಂಪರ್ಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇರಳದ ಕೋಯಿಕೋಡ್‌ನಲ್ಲಿ ನಿಫಾ ವೈರಸ್ ಸೋಂಕಿಗೆ ಬಾಲಕ ಮೃತಪಟ್ಟಿದ್ದು, ಅವರ ತಾಯಿ ಸೇರಿದಂತೆ 11 ಮಂದಿಗೆ ಸೋಂಕಿನ ಲಕ್ಷಣಗಳು ಕಾಣಿಸಿವೆ.
ನಿಫಾ ವೈರಸ್ ಸೋಂಕಿಗೆ ಒಳಗಾಗಿರುವ ಲಕ್ಷಣಗಳಿರುವ ಎಲ್ಲರ ಮಾದರಿ ಕಲೆಹಾಕಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಬಾಲಕನ ಮನೆಯ ಸುತ್ತಮುತ್ತ ಪಶುಸಂಗೋಪನೆ ತಂಡ ಪರಿಶೀಲನೆ ನಡೆಸಿದೆ. ಅವರ ಮನೆಯ ಎರಡು ಆಡುಗಳಿಂದಲೂ ಮಾದರಿ ಸಂಗ್ರಹಿಸಲಾಗಿದೆ. ಬಾವಲಿಗಳ ಮನೆಯ ಬಳಿ ಇರುವ ಮರದ ಹಣ್ಣುಗಳನ್ನು ಕಚ್ಚಿರಬಹುದು ಎನ್ನುವ ಕಾರಣಕ್ಕೆ ಮರದ ಸ್ಯಾಂಪಲ್ ಕೂಡ ಪಡೆಯಲಾಗಿದೆ.
ಈಗಾಗಲೇ ರಾಜ್ಯ ಆರೋಗ್ಯ ಇಲಾಖೆ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ ಸಂಪರ್ಕಕ್ಕೆ ಬಂದ 251 ಮಂದಿಯನ್ನು ಗುರುತಿಸಿದೆ. ಅವುಗಳಲ್ಲಿ 54 ಮಂದಿ ರಿಸ್ಕ್‌ನಲ್ಲಿದ್ದಾರೆ.
ಯಾರಿಗಾದರೂ ರೋಗ ಲಕ್ಷಣಗಳು ಇವೆಯೇ? ಅಥವಾ ಸಂಪರ್ಕದಿಂದ ಹೊರಗುಳಿದಿದ್ದಾರಾ ಎಂದು ಪರೀಕ್ಷಿಸಲು ಇಂದಿನಿಂದ ಮನೆ ಮನೆ ಕಣ್ಗಾವಲು ನಡೆಸಲು ಪ್ರಾರಂಭವಾಗಿದೆ.

ನಿಫಾ ಬಗ್ಗೆ ನೀವು ತಿಳಿಯಬೇಕಿರುವ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss