spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಫಾ ವೈರಸ್ ಶಂಕೆ: ತಪಾಣೆಗೊಳಗಾದ ವ್ಯಕ್ತಿಯ ವರದಿ ನೆಗೆಟಿವ್

- Advertisement -Nitte

ಹೊಸ ದಿಗಂತ ವರದಿ, ಮಂಗಳೂರು:

ಶಂಕಿತ ನಿಫಾ ಸೋಂಕಿನಿಂದ ಪರೀಕ್ಷೆಗೊಳಪಟ್ಟ ಮಂಗಳೂರು ಯುವಕನ ಪರೀಕ್ಷಾ ವರದಿ ಬಂದಿದೆ. ವ್ಯಕ್ತಿಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲ. ನಿಫಾ ಪರೀಕ್ಷಾ ವರದಿಯೂ ನೆಗೆಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರಲ್ಲಿ ಡೆಡ್ಲಿ ವೈರಸ್ ನಿಫಾ ಸೋಂಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಮಂಗಳವಾರ ಜಿಲ್ಲೆ ಯಾದ್ಯಂತ ಹರಡಿ ಆತಂಕಕ್ಕೆ ಕಾರಣವಾಗಿತ್ತು.
ಬುಧವಾರ ಪರೀಕ್ಷಾ ವರದಿ ಬಂದಿದ್ದು ನೆಗೆಟಿವ್ ಆಗಿದೆ. ಇದರಿಂದ ಜಿಲ್ಲೆಯ ಜನತೆಯ ಆತಂಕ ದೂರವಾಗುವಂತಾಗಿದೆ.
ಕೇರಳದಲ್ಲಿ ನಿಫಾ ವೈರಸ್​ ಭೀತಿ ಹೆಚ್ಚಾಗುತ್ತಿದ್ದಂತೆ, ಗಡಿಜಿಲ್ಲೆಯಾದ ದ.ಕ.ಜಿಲ್ಲೆಯಲ್ಲೂ ಆತಂಕ ಉಂಟುಮಾಡಿತ್ತು. ಗೋವಾ ಮೂಲದ ಯುವಕ ಮಂಗಳೂರಿನಲ್ಲಿ ನಿಫಾ ವೈರಸ್ ಶಂಕೆಯಿಂದ ಮಂಗಳವಾರ ಸ್ವಯಂ ತಪಾಸಣೆಗೆ ಒಳಗಾಗಿದ್ದರು.
ಯುವಕ ಗೋವಾದಲ್ಲಿ ಆರ್​ಟಿ-ಪಿಸಿಆರ್​ ಕಿಟ್ ತಯಾರಿಸುವ ಲ್ಯಾಬ್​ವೊಂದರಲ್ಲಿ ಮೈಕ್ರೋ ಬಯಾಲಜಿಸ್ಟ್​ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಇವರಿಗೆ ಜ್ವರ ಕಾಣಿಸಿಕೊಂಡು ಗುಣಮುಖನಾಗಿದ್ದರೂ, ಅವರಿಗೆ ತನಗೆ ನಿಫಾ ವೈರಸ್​ ಕಾಣಿಸಿಕೊಂಡಿರಬಹುದೆಂಬ ಶಂಕೆಯ ಹಿನ್ನಲೆಯಲ್ಲಿ ತಪಾಸಣೆಗೊಳಗಾಗಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss