ನೈಜೀರಿಯಾದಲ್ಲಿ ಬಸ್‌ಗಳ ಸರಣಿ ಅಪಘಾತ: 37 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈಶಾನ್ಯ ನಗರವಾದ ಮೈದುಗುರಿ ಹೊರಗೆ ಮೂರು ಬಸ್‌ಗಳು ಸರಣಿ  ಡಿಕ್ಕಿ ಹೊಡೆದು ಕನಿಷ್ಠ 37 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ದೇಶದ ರಸ್ತೆ ಸುರಕ್ಷತಾ ಸಂಸ್ಥೆ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಎರಡು ವಾಣಿಜ್ಯ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿವೆ. ಈ ವೇಳೆ ಮತ್ತೊಂದು ಬಸ್‌ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 37 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಬೊರ್ನೊ ಸ್ಟೇಟ್ ರೋಡ್ ಸೇಫ್ಟಿ ಏಜೆನ್ಸಿಯ ಮುಖ್ಯಸ್ಥ ಉತಾನೆ ಬೋಯಿ ಹೇಳಿದ್ದಾರೆ.

ಅಪಘಾತದಲ್ಲಿ ಹೆಚ್ಚಿನ ಮೃತದೇಹಗಳನ್ನು ಗುರುತಿಸಲಾಗದಂತೆ ಸುಟ್ಟು ಕರಕಲಾಗಿವೆ ಎಂದು ಬೋಯಿ ಹೇಳಿದರು. ಬೋರ್ನೊ ರಾಜ್ಯದ ರಾಜಧಾನಿ ಮೈದುಗುರಿಯಿಂದ 35 ಕಿಮೀ (20 ಮೈಲುಗಳು) ಜಕಾನಾ ಗ್ರಾಮದ ಬಳಿ ಮಾರಣಾಂತಿಕ ಅಪಘಾತ ಸಂಭವಿಸಿದೆ. ಬಸ್ ಟೈರ್ ಒಡೆದು ಮುಂದೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಸೆಕ್ಟರ್ ಕಮಾಂಡರ್ ತಿಳಿಸಿದ್ದಾರೆ. ಅಧಿಕಾರಿಗಳ ನೇತೃತ್ವದಲ್ಲಿ ಮೃತ ದೇಹಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!