Tuesday, July 5, 2022

Latest Posts

ಥಿಯೇಟರ್‌ಗಳಿಗೆ ತಟ್ಟಿದೆ ನೈಟ್‌ಕರ್ಫ್ಯೂ ಬಿಸಿ: ಇನ್ಮುಂದೆ ದಿನಕ್ಕೆ ನಾಲ್ಕು ಶೋ ಮಾತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷಾಚರಣೆ ವೇಳೆಗೆ ಒಮಿಕ್ರಾನ್ ಸೋಂಕು ಹೆಚ್ಚಳವಾಗುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ನೈಟ್ ಕರ್ಫ್ಯೂ ಬಿಸಿ ಚಿತ್ರಪ್ರದರ್ಶನಗಳಿಗೂ ತಟ್ಟಿದ್ದು, ಇನ್ಮುಂದೆ ದಿನಕ್ಕೆ ನಾಲ್ಕು ಶೋ ಮಾತ್ರ ಪ್ರದರ್ಶನವಾಗಲಿದೆ.

ಇಂದಿನಿಂದ ಜನವರಿ 7 ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಈ ವೇಳೆ ದಿನಕ್ಕೆ ನಾಲ್ಕು ಶೋ ಮಾತ್ರ ಇರಲಿದೆ. ಸಂಜೆ 7 ಗಂಟೆ ಶೋ ಕೊನೆಯ ಶೋ ಆಗಿರಲಿದೆ. ನೈಟ್ ಶೋ ಪ್ರದರ್ಶನಕ್ಕೆ ಹೆಚ್ಚು ಮಂದಿ ವೀಕ್ಷಕರು ಬರುತ್ತಿದ್ದು, ಶೇ.30ರಷ್ಟು ಆದಾಯಕ್ಕೆ ಕತ್ತರಿ ಬಿದ್ದಿದೆ.

ನೈಟ್ ಕರ್ಫ್ಯೂ ಕೇವಲ ಹತ್ತು ದಿನ ಇರುವುದರಿಂದ ಥಿಯೇಟರ್‌ಗಳು ಕೊಂಚ ಸಮಾಧಾನ ತಂದುಕೊಂಡಿವೆ. ಆದರೆ ತದನಂತರದ ಪರಿಸ್ಥಿತಿ ಮೇಲೆ ಎಲ್ಲವೂ ನಿರ್ಧರಿತವಾಗುತ್ತದೆ. ಈಗಾಗಲೇ ಸಿನಿಮಾ ಶೋಗಳು ಇಂತಿಂತ ಸಮಯಕ್ಕೆ ಎಂದು ನಿಗದಿ ಮಾಡಲಾಗಿದೆ. ಆದರೆ ಇದೀಗ ನಾಲ್ಕು ಶೋ ಮಾಡಲು, ಸಮಯ ಬದಲಾವಣೆ ಮಾಡಿದರೆ ಜನ ಬರುವುದು ಕಡಿಮೆಯಾಗುತ್ತದೆ.

ಕೊರೋನಾದಿಂದಾಗಿ ಥಿಯೇಟರ್ ಮಾಲೀಕರು ಸಾಕಷ್ಟು ನಷ್ಟ ಅನುಭವಿಸಿದ್ದು, ಇದೀಗ ಎಲ್ಲ ಸರಿಯಾಯ್ತು ಎನ್ನುವಷ್ಟರಲ್ಲಿ ಮತ್ತೆ ಒಮಿಕ್ರಾನ್ ಕಾಡಿರುವುದು ಆತಂಕದ ವಿಷಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss