ಹೊಸದಿಗಂತ ಆನ್ ಲೈನ್ ಡೆಸ್ಕ್:
ಎಲ್ಲಾ ಅಗತ್ಯ ಸೇವೆಗಳಿಗೆ ಅಡಚಣೆ ಉಂಟಾಗದಂತೆ ನೈಟ್ ಕರ್ಫ್ಯೂ ಜಾರಿಗೆ ತರಲು ನಿರ್ಧರಿಸಿದ್ದೇವೆ. ಇದರಿಂದ ಜನಸಾಮಾನ್ಯರಿಗೆ ಶ್ರಮಿಕ ವರ್ಗಕ್ಕೆ, ರಾತ್ರಿ ವೇಳೆ ಕೆಲಸ ಮಾಡುವವರಿಗೆ ಯಾರಿಗೂ ಇದರಿಂದ ತೊಂದರೆ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಅನಗತ್ಯವಾಗಿ ಓಡಾಡುವಂಥದ್ದು, ಗುಂಪು ಸೇರುವುದು, ರಾತ್ರಿ ವೇಳೆ ಪಬ್, ಬಾರ್ ಇತ್ಯಾದಿ ಮಸ್ತಿ, ಮಜಾ ಮಾಡುವವರಿಗೆ ತಾತ್ಕಾಲಿಕವಾದ ತಡೆ ಕೊಟ್ಟಿದ್ದೇವೆ ಎಂದರು.
ಇಂದು ವಸತಿ ಸಮುಚ್ಛಯಗಳಲ್ಲಿ ಓಪನ್ ಏರಿಯಾದಲ್ಲಿ ಕಾರ್ಯಕ್ರಮಗಳು, ತಡರಾತ್ರಿ ಪಾರ್ಟಿಗಳನ್ನು ಮಾಡ್ತಿರೋದ್ರಿಂದ ಕೂಡ ಹೆಚ್ಚು ಸೋಂಕು ಕಾಣಿಸಿಕೊಳ್ತಿವೆ. ಹೀಗಾಗಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳು ಮಾತನಾಡಿ ಈ ನಿರ್ಧಾರಕ್ಕೆ ಬಂದಿದ್ದಾರೆ. ರಾತ್ರಿ ಹೊತ್ತು ಹೋಗಲ್ವ ಅನ್ನೋರಿಗೆ ಹೇಳುಬಯಸುವುದೇನೆಂದರೆ ರಾತ್ರಿ ಹೊತ್ತೂ ಇರುತ್ತೆ, ಹಗಲಲ್ಲೂ ಇರುತ್ತೆ ಅನ್ನೋ ಕನಿಷ್ಟ ಜ್ಞಾನ ಸರ್ಕಾರಕ್ಕಿದೆ. ಕೊರೋನಾಬಗ್ಗೆ ಜಾಗೃತಿ ಮಾಡಿಸುವ ಪ್ರಯತ್ನ ಸರ್ಕಾರದ್ದು. ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಕಂದಾಯ ಸಚಿವರೂ ಮಾತಾಡ್ತಿದ್ದಾರೆ. ಎಲ್ಲಾ ಮಾರ್ಗಸೂಚಿಗಳನ್ನು ಅನುಷ್ಟಾನಕ್ಕೆ ತರಲಾಗ್ತಿದೆ ಎಂದು ಹೇಳಿದ್ದಾರೆ.