ರಾತ್ರಿ ವೇಳೆ ತಲೆ ಸ್ನಾನ ಒಳ್ಳೆದಾ? ಕೆಟ್ಟದ್ದಾ? ಈ ಬಗ್ಗೆ ತಜ್ಞರು ಏನು ಹೇಳ್ತಾರೆ…

ಹೊಸ ದಿಗಂತ ಡಿಜಿಟಲ್‌ ಡೆಸ್ಕ್‌
ಪುರುಷ ಹಾಗೂ ಮಹಿಳೆ ಇಬ್ಬರಿಗೂ ತಲೆಗೂದಲು ಆಕರ್ಷಣೀಯ. ತಲೆ ಮೇಲಿನ ಕೂದಲ ಆರೋಗ್ಯದ ಬಗ್ಗೆ ಇತ್ತೀಚೆಗೆ ಜನರೂ ಜಾಸ್ತಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಕೂದಲನ್ನು ಸಮೃದ್ಧವಾಗಿಡಲೆಂದೇ ಅದೆಷ್ಟೋ ಟ್ರೀಟ್ ಮೆಂಟ್‌ ಗಳಿವೆ. ಬೋಳು ತಲೆ ಇರುವವರಿಗೂ ತಲೆಯಲ್ಲಿ ಕೂದಲು ನಾಟಿ ಮಾಡುವ ತಂತ್ರಜ್ಞಾನ ಕೂಡ ಬಂದುಬಿಟ್ಟಿದೆ. ಆದರೆ ನಮ್ಮ ಕೂದಲು ಉದುರದಂತೆ, ಆರೋಗ್ಯವಾಗಿ ನೋಡಿಕೊಳ್ಳುವುದು ಒಂದು ಸವಾಲೇ ಸರಿ. ಪ್ರತಿನಿತ್ಯ ತಲೆಸ್ನಾನ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ನಮಗೆ ಹೆಚ್ಚಿನ ಸಮಯ ಇಲ್ಲ ಎಂದು ಗಡಿಬಿಡಿಯಲ್ಲಿ ತಲೆಗೂದಲನ್ನು ಸರಿಯಾಗಿ ತೊಳೆಯದೇ ಇರುವುದು ಒಂದು ಸಮಸ್ಯೆಯಾದರೆ, ಹೆಚ್ಚಿನ ಸಮಯ ಸಿಗುತ್ತದೆ ಎಂದು ರಾತ್ರಿ ವೇಳೆ ಸ್ನಾನ ಮಾಡಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ.

ಇದರಿಂದ ಆರೋಗ್ಯಕ್ಕೇನು ಹಾನಿ ನೋಡೋಣ..

1. ರಾತ್ರಿ ಸ್ನಾನ ಮಾಡುವುದರಿಂದ ಕೂದಲಿಗೆ ಹೆಚ್ಚಿನ ತೇವಾಂಶ ಸಿಗುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಉಲ್ಭಣಗೊಳ್ಳುತ್ತವೆ.
2. ಇದು ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ಸೋಂಕುಗಳಿಗೆ ಕಾರಣವಾಗಬಹುದು.
3. ರಾತ್ರಿ ಸ್ನಾನ ಮೈಗ್ರೇನ್ ಮತ್ತು ತಲೆನೋವಿನಂತಹ ಸಮಸ್ಯೆಗಳೂ ಬರಬಹುದು.
4. ಒದ್ದೆಯಾದ ಕೂದಲಿನೊಂದಿಗೆ ಮಲಗುವುದು ನೆಗಡಿಗೆ ಆಹ್ವಾನ ನೀಡಿದಂತೆ.
5. ಒದ್ದೆ ಕೂದಲನ್ನು ಬಾಚುವುದರಿಂದ ಕೂದಲು ಉದುರುತ್ತದೆ.
6. ಕೂದಲು ಸಡಿಲವಾಗಲು ರಾತ್ರಿ ತಲೆ ಸ್ನಾನ ಪ್ರಮುಖ ಕಾರಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!