Tuesday, June 28, 2022

Latest Posts

ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಕಟ್ಟು ನಿಟ್ಟಿನ ನೈಟ್ ಕರ್ಫ್ಯೂ ಜಾರಿ: ಎಲ್ಲೆಲ್ಲಿ ಇರಲಿದೆ ಚೆಕ್ ಪೋಸ್ಟ್?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.

ನೈಟ್ ಕರ್ಪ್ಯೂ ಹಿನ್ನೆಲೆ ಬೆಂಗಳೂರು ನಗರದಲ್ಲಿ ಇಂದಿನಿಂದ ರಾತ್ರಿ 9.30ಕ್ಕೆ ಪ್ರಮುಖ ರಸ್ತೆಗಳು ಮತ್ತು ಮೇಲ್ಸೇತುವೆಗಳು ಬಂದ್ ಆಗಲಿದೆ. ಮನೆಯಿಂದ ರಾತ್ರಿ ವೇಳೆ ಹೊರಬರುವ ವಾಹನಗಳನ್ನು ಸೀಸ್ ಮಾಡಲಾಗುವುದು. ಹಲವೆಡೆ ನಾಕಾಬಂದಿ ಅವಳಡಿಸಲಾಗುತ್ತೆ.  ನಾಕಬಂದಿ ಹಾಕಿರುವ ಸ್ಥಳದಲ್ಲಿ ಪೊಲೀಸ್ ಭದ್ರತೆ ಇರಲಿದೆ.

ಎಲ್ಲೆಲ್ಲಿ ಚೆಕ್ ಪೋಸ್ಟ್ ಇರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ….

ಈಶಾನ್ಯ ವಿಭಾಗ:

ವಿದ್ಯಾರಣ್ಯಪುರ ಸರ್ಕಲ್, ಬಿಇಎಲ್ ಸರ್ಕಲ್, ಯಲಹಂಕ ಮುಖ್ಯರಸ್ತೆ, ಏರ್ಪೋರ್ಟ್ ರೋಡ್, ಹೆಬ್ಬಾಳ ಮೇಲ್ಸೇತುವೆ, ಸಂಪಿಗೆಹಳ್ಳಿ

ಆಗ್ನೇಯ ವಿಭಾಗ:

ಮಾರುಕಟ್ಟೆ ಮೇಲ್ಸೇತುವೆ, ಮಾರುಕಟ್ಟೆ ಸರ್ಕಲ್​, ಮೈಸೂರು ರಸ್ತೆ‌, ಕೆಂಗೇರಿ ಮುಖ್ಯರಸ್ತೆ, ಕೆ.ಪಿ. ಅಗ್ರಹಾರ, ಮಾಗಡಿ ರೋಡ್, ವೀರಸಂದ್ರ ಚೆಕ್ ಪೋಸ್ಟ್, ಬೋಮ್ಮನಹಳ್ಳಿ ಚೆಕ್ ಪೋಸ್ಟ್, ಸಿಲ್ಕ್ ಬೋರ್ಡ್, ಮಡಿವಾಳ, ಸೆಂಟ್ಸ್ ಜಾನ್ಸ್, ಆಡುಗೋಡಿ ಜಂಕ್ಷನ್, ಕೋರಮಂಗಲ ಎನ್ ಜಿವಿ ಕಾಂಪ್ಲೆಕ್ಸ್

ಪೂರ್ವ ವಿಭಾಗ:

ಟ್ರಿನಿಟಿ ಸರ್ಕಲ್, ಬಿಆರ್​ವಿ ಜಂಕ್ಷನ್, ನಾಗವಾರ ಜಂಕ್ಷನ್, ಬಾಣಸವಾಡಿ, ಕಮ್ಮನಹಳ್ಳಿ ರೋಡ್, ಮಣಿಪಾಲ್ ಹಾಸ್ಪಿಟಲ್ ಜಂಕ್ಷನ್, ಓಲ್ಡ್ ಏರ್​ಪೋರ್ಟ್ ರೋಡ್

ಕೇಂದ್ರ ವಿಭಾಗ:

ಟೌನ್ ಹಾಲ್, ಚಿನ್ನಸ್ವಾಮಿ ಸ್ಟೇಡಿಯಂ, ಕಾರ್ಪೋರೇಷನ್ ಸರ್ಕಲ್, ಕೆ.ಆರ್ ಸರ್ಕಲ್

ಉತ್ತರ ವಿಭಾಗದ:

ಯಶವಂತಪುರ ಸರ್ಕಲ್​, ಗಂಗಮ್ಮಗುಡಿ ಸರ್ಕಲ್, ತುಮಕೂರು ರಸ್ತೆ, ಗೊರಗುಂಟೆ ಪಾಳ್ಯ, ಪೀಣ್ಯ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss