ಹೊಸದಿಗಂತ ವರದಿ, ಮಂಗಳೂರು:
ನಕ್ಸಲ್ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಕುಂದಾಪುರ ತಾಲೂಕಿನ ತೊಂಬಟ್ಟು ಲಕ್ಷ್ಮೀ ಉಡುಪಿ ಜಿಲ್ಲಾಡಳಿತ ಮುಂದೆ ಶರಣಾಗಿದ್ದಾಳೆ.
ಶರಣಾಗತಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ ಲಕ್ಷ್ಮೀ ತೊಂಬಟ್ಟು ಅವರು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು.
ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ್ ಜೊತೆ ನಕ್ಸಲ್ ಲಕ್ಷ್ಮಿ, ಎಸ್‌ಪಿ ಕಚೇರಿಗೆ ಆಗಮಿಸಿದರು.
ಅಲ್ಲಿ ಶರಣಾಗತಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬಳಿಕ ಭದ್ರತೆಯೊಂದಿಗೆ ಡಿಸಿ ಕಚೇರಿಗೆ ಲಕ್ಷ್ಮಿಯನ್ನು ಪೊಲೀಸರು ಕರೆದೊಯ್ದರು. ಶರಣಾದ ನಕ್ಸಲ್ ಜೊತೆ ಆಕೆಯ ಸಹೋದರ ಮತ್ತು ಬಂಧುಗಳು ಹಾಜರಿದ್ದರು.
ನಕ್ಸಲ್ ಚಟುವಟಿಕೆಗಳಲ್ಲಿ ಉಡುಪಿ ಜಿಲ್ಲೆಯ ವಿಕ್ರಂಗೌಡ ಹಾಗೂ ಲಕ್ಷ್ಮಿ ತೊಂಬಟ್ಟು ತೊಡಗಿಸಿಕೊಂಡಿದ್ದರು. ಲಕ್ಷ್ಮೀಯವರು 2006 ಮಾರ್ಚ್ 6ರಂದು ಊರು ತೊರೆದಿದ್ದರು. ಅವರು ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು.