ನೀರವ್ ಮೋದಿ, ವಿಜಯ್ ಮಲ್ಯ ‌ಗಡೀಪಾರು ವಿಚಾರ: ಬ್ರಿಟನ್ ಪ್ರಧಾನಿ ಬೋರಿಸ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಮತ್ತು ಯುಕೆ ದ್ವಿಪಕ್ಷೀಯ ಚರ್ಚೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇತರ ದೇಶಗಳು ಮತ್ತು ಭಾರತಕ್ಕೆ ಬೆದರಿಕೆ ಹಾಕುವ ಉಗ್ರಗಾಮಿ ಗುಂಪುಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ತಮ್ಮ ದ್ವಿಪಕ್ಷೀಯ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್ ಅವರು ಖಲಿಸ್ತಾನಿ ಗುಂಪುಗಳು ಮತ್ತು ಭಾರತದ ವಾಟೆಂಡ್ ಆರ್ಥಿಕ ಅಪರಾಧಿಗಳ ಬಗ್ಗೆ ಚರ್ಚಿಸಿದರು.
ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಖಲಿಸ್ತಾನಿ ಉಗ್ರಗಾಮಿಗಳ ಬಗ್ಗೆ ಮಾತನಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಭಾರತಕ್ಕೆ ಸಹಾಯ ಮಾಡಲು ನಾವು ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ. ಬ್ರಿಟನ್ ಸರ್ಕಾರವು ಹಸ್ತಾಂತರಕ್ಕೆ ಆದೇಶ ನೀಡಿದೆ. ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸಲು ಬಯಸುವ ಜನರನ್ನು ನಾವು ಸ್ವಾಗತಿಸುವುದಿಲ್ಲ. ಇತರ ದೇಶಗಳಿಗೆ ಬೆದರಿಕೆ ಹಾಕುವ, ಭಾರತಕ್ಕೆ ಬೆದರಿಕೆ ಹಾಕುವ ಉಗ್ರಗಾಮಿ ಗುಂಪುಗಳನ್ನು ನಾವು ಸಹಿಸುವುದಿಲ್ಲ ಎಂಬ ಬಲವಾದ ಅಭಿಪ್ರಾಯವನ್ನು ನಾವು ಹೊಂದಿದ್ದೇವೆ. ನಾವು ಭಾರತಕ್ಕೆ ಸಹಾಯ ಮಾಡಲು ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ ಎಂದಿದ್ದಾರೆ.
ಇನ್ನು ದ್ವಿಪಕ್ಷೀಯ ಮಾತುಕತೆಯ ನಂತರ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿನೀಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಆರ್ಥಿಕ ಅಪರಾಧಿಗಳ ಸಮಸ್ಯೆಯ ಕುರಿತು ನಾವು ಯುಕೆಯೊಂದಿಗೆ ವಿವಿಧ ಹಂತಗಳಲ್ಲಿ ಕೆಲವು ಸಮಯದಿಂದಪ್ರಸ್ತಾಪಿಸುತ್ತಿದ್ದೇವೆ. ಈ ದೇಶದಲ್ಲಿ ನ್ಯಾಯವನ್ನು ಎದುರಿಸಲು ಭಾರತದ ವಾಟೆಂಡ್ ಬಿಲಿಯನೇರ್‌ಗಳನ್ನು ಮರಳಿ ಕರೆತರುವುದು ನಮ್ಮ ಉದ್ದೇಶವಾಗಿದೆ. ದ್ವಿಪಕ್ಷೀಯ ಮಾತುಕತೆಯ ವೇಳೆ ಈ ವಿಷಯವನ್ನು ಚರ್ಚಿಸಲಾಗಿದೆ ಎಂದಿದ್ದಾರೆ.
‘ಯುಕೆ ಪ್ರಧಾನಿ ಜಾನ್ಸನ್ ಅವರು ಈ ವಿಷಯವೂ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಅವರು ಈ ವಿಷಯದಲ್ಲಿ ಭಾರತೀಯ ಕಳವಳಗಳಿಗೆ ಬಹಳ ಸಂವೇದನಾಶೀಲರಾಗಿದ್ದಾರೆ ಮತ್ತು ಅವರು ಏನು ಮಾಡಬಹುದೆಂದು ನೋಡೋಣ ಎಂದು ಹೇಳಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತಕ್ಕೆ ಉಪನ್ಯಾಸ ನೀಡುವುದಿಲ್ಲ
ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತಕ್ಕೆ ಉಪನ್ಯಾಸ ನೀಡುವುದಿಲ್ಲ ಎಂದು ಯುಕೆ ಸ್ಪಷ್ಟಪಡಿಸಿದ್ದರೂ, ಉಭಯ ನಾಯಕರ ನಡುವೆ ಯುದ್ಧದ ಬಗ್ಗೆ ಚರ್ಚಿಸಲಾಗಿದೆ ಎಂದು ಶ್ರಿಂಗ್ಲಾ ಹೇಳಿದರು.
ಫೆಬ್ರವರಿ 24 ರಂದು ರಷ್ಯಾದಿಂದ ದಾಳಿಗೊಳಗಾದ ಉಕ್ರೇನ್ ದೇಶದಲ್ಲಿ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಇಬ್ಬರೂ ತೀವ್ರ ಕಳವಳ ವ್ಯಕ್ತಪಡಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಮುಂದುವರಿಸಬೇಕು ಮತ್ತು ವಿಷಯವನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!