Wednesday, August 10, 2022

Latest Posts

ನಿರ್ಮಲ್ ಕುಮಾರ್ ಸುರಾಣಾ ಪಕ್ಷದ ಕೊಂಡಿಯಂತೆ: ಶಾಸಕ ರಾಜಕುಮಾರ ಪಾಟೀಲ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದ ಮೂರು ಮಹಾ ನಗರ ಪಾಲಿಕೆಯ ಚುನಾವಣೆಗಳಲ್ಲಿ ಪಕ್ಷದ ಕೊಂಡಿಯಂತೆ ಎಲ್ಲ ಕಾರ್ಯವನ್ನು ಸಂಘಟನಾತ್ಮಕವಾಗಿ ಮಾಡಿ ಮೂರು ಜಿಲ್ಲೆಗಳಲ್ಲಿ ಕೇಸರಿ ಧ್ವಜವನ್ನು ಹಾರಿಸಿದ ಕೀರ್ತಿಯೂ ರಾಜ್ಯ ಪಾಲಿಕೆಯ ಚುನಾವಣೆಯನ್ನು ಹೊತ್ತ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುರಾಣಾ ಅವರಿಗೆ ಸಲ್ಲುತ್ತದೆ ಎಂದು ಶಾಸಕ ರಾಜಕುಮಾರ್ ಪಾಟೀಲ ಹೇಳಿದರು.
ಅವರು ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ನೂತನ ಪಾಲಿಕೆಯ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕಲಬುರಗಿ,ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ತಮ್ಮದೇ ಆದ ರಣತಂತ್ರದ ಮೂಲಕ ಮೂರು ಪಾಲಿಕೆ ಚುನಾವಣೆಯಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ ಎಂದರು.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷದ ಅಸ್ತಿತ್ವವನ್ನು ಕಟ್ಟಿಬೆಳೆಸಿದ ಕೀರ್ತಿ ಸುರಾಣಾ ಅವರಗೆ ಸಲ್ಲುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಸರಣಿ ಸಭೆಗಳನ್ನು ಮಾಡುವ ಮೂಲಕ ಹಾಗೂ ತಮ್ಮ ಸಂಘಟನೆಯ ಮೂಲಕ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಲ್ಲಿ ನಿರ್ಮಲ್ ಜೀ ಅವರ ಪ್ರಮುಖ ಪಾತ್ರವಿದೆ ಎಂದರು. ಪಕ್ಷದ ಕೊಂಡಿಯಂತೆ ಮೂರು ಪಾಲಿಕೆ ಚುನಾವಣೆಯಲ್ಲಿ ತಂತ್ರಗಳನ್ನು ಹೆಣೆದು ಪಾಲಿಕೆ ಪಕ್ಷದ ವಿಜಯ ಪತಾಕೆಯನ್ನು ಹಾರಿಸಿದ್ದಾರೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss