ಇಂದು 2022-2023ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಕೇಂದ್ರ ಸರ್ಕಾರ 2022-2023ನೇ ಸಾಲಿನ ಬಜೆಟ್‌ ಮಂಡಿಸಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಾಲ್ಕನೇ ಬಾರಿಗೆ ಲೋಕಸಭೆಯಲ್ಲಿ ಬಜೆಟ್‌ ಮಂಡಿಸುತ್ತಾರೆ. ಇದು ಪ್ರಧಾನಿ ಮೋದಿ ಸರ್ಕಾರದ 10ನೇ ಬಜೆಟ್‌ ಆಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡನೆಯಾಗಲಿದ್ದು, ಈ ಬಾರಿ 90ರಿಂದ120 ನಿಮಿಷಗಳ ಕಾಲ ಬಜೆಟ್‌ ಮಂಡಿಸುವ ನಿರೀಕ್ಷೆ ಇದೆ. 2020ರಲ್ಲಿ ದಾಖಲೆಯ 160 ನಿಮಿಷಗಳ ಬಜೆಟ್‌ ಮಂಡನೆಯಾಗಿತ್ತು.
ಕಳೆದ ಎರಡು ವರ್ಷಗಳಿಂದ ಬಜೆಟ್‌ ಪ್ರತಿ ಮುದ್ರಿಸುತ್ತಿಲ್ಲ. ಕಾಗದರಹಿತ ಬಜೆಟ್‌ ಮಂಡಿಸುತ್ತಿದ್ದಾರೆ. ಸೂಟ್‌ ಕೇಸ್‌ ಬದಲು ಟ್ಯಾಬ್‌ ಬಳಸಲಾಗುತ್ತಿದ್ದು, ಈ ಬಾರಿಯೂ ಟ್ಯಾಬ್‌ ಸಂಪ್ರದಾಯ ಮುಂದುವರಿಸಲಾಗುತ್ತಿದೆ.
ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿತ್ತ ಸಚಿವಾಲಯದಿಂದ ರಾಷ್ಟ್ರಪತಿ ಭವನದತ್ತ ಹೊರಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!