ಶೃಂಗೇರಿಯಿಂದ-ಕಿಷ್ಕಿಂಧೆವರೆಗೂ ಇಂದಿನಿಂದ ನಿರ್ಮಲ ತುಂಗಭದ್ರಾ ಅಭಿಯಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟುವ ತುಂಗ ಭದ್ರಾ ನದಿಗಳು ಕಲುಷಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನದಿಯ ಉಳಿವಿಗಾಗಿ ಇಂದಿನಿಂದ ಶೃಂಗೇರಿಯಿಂದ ದಾವಣಗೆರೆ ಜಿಲ್ಲೆಯ ಹರಿಹರದ ಕಿಷ್ಕಿಂಧೆ ಪಟ್ಟಣದವರೆಗೂ ಪಾದಯಾತ್ರೆ ಹಮ್ಮಿ‌ಕೊಳ್ಳಲಾಗಿದೆ.

ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್​​ ಸಹಯೋಗದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಶೃಂಗೇರಿಯಿಂದ ಪಾದಯಾತ್ರೆ ಪ್ರಾರಂಭವಾಗುತ್ತದೆ. ನವೆಂಬರ್ 14ರಂದು ಹರಿಹರದಲ್ಲಿ ಮೊದಲ ಹಂತದ ಪಾದಯಾತ್ರೆ ಮುಕ್ತಾಯವಾಗಲಿದೆ. ಶೃಂಗೇರಿಯಿಂದ ಹರಿಹರದತನಕ 200 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಗಂಗಾ ನದಿ ಉಳಿವಿಗಾಗಿ ನಡೆಸಿದ ಪಾದಯಾತ್ರೆಯ ಯಶಸ್ವಿಯೇ ಈ ಅಭಿಯಾನಕ್ಕೆ ಪ್ರೇರಣೆಯಾಗಿದೆ.

ಈ ಅಭಿಯಾನದಲ್ಲಿ ನೀರು ಎಲ್ಲರಿಗೂ ಅತ್ಯಮೂಲ್ಯ ಎಂಬುದನ್ನು ತಿಳಿಸಲು ಹಾಗೂ ಜಲ‌ ಮೂಲಗಳ ಸಂರಕ್ಷಣೆ‌ ಮಾಡಬೇಕೆಂಬ ಅರಿವು ಮೂಡಿಸುವ ಸಲುವಾಗಿ ತುಂಗಭದ್ರ ನದಿ ಉಳಿಸಿ ಅಭಿಯಾನದ ಪಾದಯಾತ್ರೆಯಲ್ಲಿ ಗ್ರಾಮ ಪಟ್ಟಣಗಳಲ್ಲಿನ ಜನರಿಗೆ ಜಲಜಾಗೃತಿ ಮೂಡಿಸಲಾಗುತ್ತದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!