ಹೊಸದಿಗಂತ ಆನ್ ಲೈನ್ ಡೆಸ್ಕ್:
ಖ್ಯಾತ ಸರ್ಚಿಂಗ್ ತಾಣವಾಗಿರುವ ಯೂಟ್ಯೂಬ್ ನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ 4 ಲಕ್ಷ ರೂ. ಗಳಿಸಿದ್ದಾರಂತೆ.
ಹೌದು, ಕೋವಿಡ್ ಲಾಕ್ ಡೌನ್ ಸಮಯದಲ್ಲಿ ತಾವು ಮನೆಯಲ್ಲಿ ಕಾಲ ಕಳೆದ ಅನುಭವವನ್ನು ಸ್ವತಃ ಸಚಿವ ನಿತಿನ್ ಗಡ್ಕರಿ ಅವರೇ ಜನರೊಂದಿಗೆ ಹಂಚಿಕೊಂಡಿದ್ದು, ನಾನು ಮನೆಯಲ್ಲಿದ್ದುಕೊಂಡು ಎರಡು ಕೆಲಸ ಮಾಡಿದೆ. ಒಂದು ಮನೆಯಲ್ಲಿ ಅಡುಗೆ ಮಾಡೋದು, ಮತ್ತೊಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡೋದು.
ಈ ಭಾಷಣಗಳನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿತ್ತಿದ್ದೆ. ಇದನ್ನು ಕೋಟ್ಯಾಂತರ ಜನ ವೀಕ್ಷಿಸಿದ ಹಿನ್ನೆಲೆ ಈಗ ಯೂಟ್ಯೂಬ್ ನನಗೆ ತಿಂಗಳಿಗೆ 4 ಲಕ್ಷ ರೂ. ಪಾವತಿ ಮಾಡುತ್ತಿದೆ.
ಇದೇ ವೇಳೆ ತಮ್ಮ ಹಳೆಯ ನೆನಪುಗಳನ್ನು ನೆನೆದ ಸಚಿವರು, ಅದು ನಾನು ಮದುವೆ ಆದ ಆರಂಭದ ದಿನಗಳು. ನನ್ನ ಮಾವನ ಮನೆ ರಸ್ತೆ ಮಧ್ಯದಲ್ಲಿತ್ತು. ರಸ್ತೆ ಕಾಮಗಾರಿಗೆ ಈ ಮನೆ ಅಡ್ಡವಾಗಿದ್ದು, ಮನೆ ತೆರವು ಮಾಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಬಗ್ಗೆ ನನ್ನ ಪತ್ನಿಗೂ ಮಾಹಿತಿ ನೀಡದೆ ನಾನು ಮಾವನ ಮನೆಯನ್ನು ಕೆಡವಲು ಅಧಿಕಾರಿಗಳಿಗೆ ಆದೇಶಿಸಿದೆ ಎಂದರು.