Saturday, December 9, 2023

Latest Posts

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಲೆಕ್ಷನ್ (Karnataka Film Chamber Election) ನಡೆದಿದ್ದು, ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಬಾ ಮಾ ಗಿರೀಶ್ ಆಯ್ಕೆಯಾಗಿದ್ದಾರೆ.

ಖಜಾಂಚಿಯಾಗಿ ಜಯಸಿಂಹ ಮಸೂರಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಪ್ರಮಿಳಾ ಜೋಷಾಯ್ ಆಯ್ಕೆ ಆಗಿದ್ದಾರೆ.

ಭಾರೀ ಕುತೂಹಲ ಕೆರಳಿಸಿದ್ದ ಇಂದಿನ ಫಿಲಂ ಚೇಂಬರ್ ಚುನಾವಣೆ ಮತದಾನವು ರೇಸ್ ಕೋರ್ಸ್ ಬಳಿ ಇರುವ ‘ಗುರುರಾಜ ಕಲ್ಯಾಣ ಮಂಟ’ದಲ್ಲಿ ನಡೆದಿದೆ. ಮತದಾನ ಪ್ರಕ್ರಿಯೆ ಮಧ್ಯಾಹ್ನ 2 ರಿಂದ 6ರವರೆಗೂ ನಡೆದಿದ್ದು, ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಮೂರು ವಲಯಗಳಿಂದ ಮತದಾನ ನಡೆದಿದೆ.

ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟಿದ್ದು, ಸ್ಪರ್ಧಾ ಕಣದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ನಿರ್ಮಾಪಕರಾದ NM ಸುರೇಶ್, ಶಿಲ್ಪಾ ಶ್ರೀನಿವಾಸ್, ಮಾರ್ಸ್ ಸುರೇಶ್, ಎ ಗಣೇಶ್ ಇದ್ದರು.

ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ ಆಯ್ಕೆಯಾಗಿದ್ದಾರೆ. ಅಭ್ಯರ್ಥಿ NM ಸುರೇಶ್ ಅವರಿಗೆ ಸಾ ರಾ ಗೋವಿಂದ್ ಹಾಗೂ ಉಮೇಶ್ ಬಣಕಾರ್ ಬೆಂಬಲ ವ್ಯಕ್ತಪಡಿಸಿದ್ದರು. ಶಿಲ್ಪಾ ಶ್ರೀನಿವಾಸ್ ಅವರಿಗೆ ಭಾ ಮಾ ಹರೀಶ್ ಬೆಂಬಲವಿತ್ತು ಎನ್ನಲಾಗಿದ್ದು ಚುನಾವಣೆ ತೀವ್ರ ಕೂತೂಹಲಕ್ಕೆ ಕಾರಣವಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!