ಕಾಶಿ ಮತ್ತು ಮಥುರಾ ವಿಚಾರದಲ್ಲಿ ಬಿಜೆಪಿ ಪಾತ್ರವಿಲ್ಲ-ಜೆ.ಪಿ.ನಡ್ಡಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಶಿ ವಿಶ್ವನಾಥ ದೇಗುಲ ಮತ್ತು ಗ್ಯಾನವಾಪಿ ಮಸೀದಿ ವಿಚಾರದಲ್ಲಿ ಬಿಜೆಪಿ ಪಾತ್ರವಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸ್ಪಷ್ಟಪಡಿಸಿದ್ದಾರೆ. ಈ ವಿಷಯವನ್ನು ಪರಿಶೀಲಿಸುವ ಬಗ್ಗೆ ನ್ಯಾಯಾಲಯ ಹಾಗೂ ಸಂವಿಧಾನಕ್ಕೆ ಬಿಡಲಾಗಿದೆ. ಸಾಂಸ್ಕೃತಿಕ ಬೆಳವಣಿಗೆಗೆ ಭಾರತೀಯ ಜನತಾ ಪಕ್ಷ ಸದಾ ಶ್ರಮಿಸುತ್ತದೆ. ನ್ಯಾಯಾಲಯದ ಆದೇಶಕ್ಕೆ ಬಿಜೆಪಿ ಬದ್ಧವಾಗಿದೆ. ಗ್ಯಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹಕ್ಕು ಮತ್ತು ಪ್ರತಿವಾದಗಳ ನಡುವೆ, ಕಾಶಿ ಮತ್ತು ಮಥುರಾ ದೇವಾಲಯಗಳನ್ನು ಹಿಂಪಡೆಯುವಂತಹ ವಿವಾದಾತ್ಮಕ ಧಾರ್ಮಿಕ ವಿಷಯಗಳು ತಮ್ಮ ಪಕ್ಷದ ಕಾರ್ಯಸೂಚಿಯಲ್ಲಿಲ್ಲ ಎಂದು ನಡ್ಡಾ ಸೋಮವಾರ ಸ್ಪಷ್ಟಪಡಿಸಿದ್ದಾರೆ.

‘ನಾವು ಯಾವಾಗಲೂ ಸಾಂಸ್ಕೃತಿಕ ಬೆಳವಣಿಗೆಯ ಬಗ್ಗೆ ಮಾತನಾಡುತ್ತೇವೆ. ಈ ಸಮಸ್ಯೆಗಳನ್ನು ಸಂವಿಧಾನ ಮತ್ತು ನ್ಯಾಯಾಲಯಗಳ ತೀರ್ಪುಗಳಿಂದ ಪರಿಹರಿಸಬೇಕು ಮತ್ತು ಬಿಜೆಪಿ ಅದನ್ನು ಸ್ಪೂರ್ತಿಯಿಂದ ಅನುಸರಣೆ ಮಾಡುತ್ತದೆʼ ಎಂದು ಜೆ.ಪಿ.ನಡ್ಡಾ ಮೋದಿ ಸರ್ಕಾರದ 8ನೇ ವರ್ಷಾಚರಣೆ ಸಂದರ್ಭದಲ್ಲಿ ತಿಳಿಸಿದರು. ರಾಮಜನ್ಮಭೂಮಿ ವಿಚಾರವು ಪಾಲಮೂರಿನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಂಗೀಕಾರವಾದ ನಿರ್ಣಯದ ಭಾಗವಾಗಿದೆ. ‘ಅಂದಿನಿಂದ ಇಲ್ಲಿಯವರೆಗೆ ಇತರೆ ಯಾವುದೇ ನಿರ್ಣಯಕ್ಕೆ ಬಂದಿಲ್ಲ’ ಎಂದರು.

ಜೂನ್ 1989 ರ ಪಾಲಮುರು ನಿರ್ಣಯದ ನಂತರ, ಬಿಜೆಪಿಯು ರಾಮ ಜನ್ಮಭೂಮಿ ಆಂದೋಲನವನ್ನು ಪ್ರಾರಂಭಿಸಿತು, ಅದುವರೆಗೂ ವಿಶ್ವ ಹಿಂದೂ ಪರಿಷತ್ತು ತನ್ನ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಆಯೋಜಿಸಿತ್ತು. ಎಲ್.ಕೆ.ಅಡ್ವಾಣಿಯವರು “ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗಬೇಕು” ಎಂದು ರಥಯಾತ್ರೆಯನ್ನು ಘೋಷಿಸಿದರು. ಕಾಶಿ ಮಥುರಾ ವಿಚಾರವಾಗಿ ಬಿಜೆಪಿ ಇದುವರೆಗೂ ಏನನ್ನೂ ಹೇಳಿಲ್ಲ. ಕಾನೂನನ್ನು  ಜನರು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ನಾವು ನ್ಯಾಯಾಲಯದ ಆದೇಶವನ್ನಷ್ಟೇ ಪಾಲಿಸುತ್ತೇವೆ ಎಂದರು.

ರಾಜಕೀಯವಾಗಿ ಕೆಲಸ ಮಾಡುವಾಗ ನಮ್ಮೊಂದಿಗೆ ನಾವು ಎಲ್ಲರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೇವೆ. ನಾವು ಯಾವಾಗಲೂ ಬಲಿಷ್ಠ ರಾಷ್ಟ್ರ, ಏಕ ರಾಷ್ಟ್ರ ಎಂಬ ತತ್ವದ ಮೇಲೆ ಕೆಲಸ ಮಾಡುತ್ತಿದ್ದೇವೆ. ಮೋದಿ ಸರ್ಕಾರ ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ತತ್ವಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!