Wednesday, February 28, 2024

ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ ಪ್ರತಿಗಳನ್ನು ಸುಡುವಂತಿಲ್ಲ: ಡೆನ್ಮಾರ್ಕ್‌ ಸಂಸತ್ತಿನಲ್ಲಿ ಮಸೂದೆಗೆ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ (Quran) ಪ್ರತಿಗಳನ್ನು ಸುಡುವುದನ್ನು ಕಾನೂನುಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ (Denmark Parliament) ಗುರುವಾರ ಅಂಗೀಕರಿಸಿದೆ.

ಈ ವಿಷಯದ ಬಗ್ಗೆ ಡೆನ್ಮಾರ್ಕ್ ಮತ್ತು ಸ್ವೀಡನ್​​ನಲ್ಲಿ ಈ ವರ್ಷ ಸಾರ್ವಜನಿಕ ಪ್ರತಿಭಟನೆಗಳು ನಡೆದಿತ್ತು. ಅಲ್ಲಿ ಇಸ್ಲಾಂ ವಿರೋಧಿ ಕಾರ್ಯಕರ್ತರು ಕುರಾನ್‌ನ ಪ್ರತಿಗಳನ್ನು ಸುಟ್ಟುಹಾಕಿದ್ದರು. ಈ ಕ್ರಮ ಮುಸ್ಲಿಮರಿಗೆ ಸಿಟ್ಟು ತರಿಸಿದ್ದು ಅಲ್ಲಿನ ಸರ್ಕಾರಗಳು ಇದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದವು.

ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ ಪ್ರತಿಗಳನ್ನು ಸುಡುವುದನ್ನು ಕಾನೂನುಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ತು ಗುರುವಾರ ಅಂಗೀಕರಿಸಿತು.

ಕುರಾನ್‌ ಪ್ರತಿಗಳನ್ನು ಸುಡುವುದು, ಧರ್ಮವನ್ನು ಟೀಕಿಸುವುದು ಸರಿಯಲ್ಲ. ಇಂತಹ ನಡವಳಿಕೆಗಳು ಈ ನೆಲದ ಉದಾರವಾದಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಸ್ವೀಡನ್‌ ಮತ್ತು ಡೆನ್ಮಾರ್ಕ್‌ನ ದೇಶೀಯ ವಿಮರ್ಶಕರು ವಾದಿಸಿದ್ದಾರೆ.

ಡೆನ್ಮಾರ್ಕ್‌ನ ಕೇಂದ್ರೀಯ ಸಮ್ಮಿಶ್ರ ಸರ್ಕಾರವು ಹೊಸ ನಿಯಮಗಳು ವಾಕ್ ಸ್ವಾತಂತ್ರ್ಯದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ. ಇತರ ರೀತಿಯಲ್ಲಿ ಧರ್ಮವನ್ನು ಟೀಕಿಸುವುದು ಕಾನೂನುಬದ್ಧವಾಗಿ ಉಳಿಯುತ್ತದೆ ಎಂದು ವಾದಿಸಿದೆ.

ಕಾನೂನು ಮನ್ನಣೆ ಪಡೆದ ಧಾರ್ಮಿಕ ಸಮುದಾಯಕ್ಕೆ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿರುವ ಬರಹಗಳನ್ನು ಅವಮಾನಿಸುವುದನ್ನು ಕೂಡಾ ಅಪರಾಧ ಎಂದು ಪರಿಗಣಿಸುತ್ತದೆ. 179-ಸದಸ್ಯರ ಫೋಲ್ಕೆಟಿಂಗ್ ಎಂದೂ ಕರೆಯಲ್ಪಡುವ ಡ್ಯಾನಿಶ್ ಸಂಸತ್ತು ಪರವಾಗಿ 94 ಮತಗಳೊಂದಿಗೆ ಮಸೂದೆಯನ್ನು ಅಂಗೀಕರಿಸಲಾಯಿತು. ಶಾಸನದ ವಿರುದ್ಧ ಎಪ್ಪತ್ತೇಳು ಮತಗಳು ಚಲಾವಣೆಯಾದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!