ತಿರುಪತಿ ದೇಗುಲ ಗೋಪುರಕ್ಕೆ ಚಿನ್ನದ ಲೇಪನ: ದರ್ಶನ ಪದ್ಧತಿಯಲ್ಲಿ ಬದಲಾವಣೆ ಇಲ್ಲ- ಟಿಟಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಿರುಪತಿ ತಿಮ್ಮಪ್ಪ ದೇವಾಲಯದ ಗರ್ಭಗುಡಿಯ ಈಗಿರುವ ಆನಂದ ನಿಲಯ ಗೋಪುರವನ್ನು ಬದಲಾಯಿಸಿ, ಹೊಸದರೊಂದಿಗೆ ಚಿನ್ನದ ಲೇಪನ ಮಾಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದರೆ ಭಕ್ತಾದಿಗಳಿಗೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ತಿರುಮಲದಲ್ಲಿ ವೆಂಕಟೇಶ್ವರನ ದರ್ಶನ ಪದ್ಧತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಸ್ಪಷ್ಟಪಡಿಸಿದೆ.
ʼಟ್ರಸ್ಟ್ ಬೋರ್ಡ್ ಆನಂದ ನಿಲಯದ ಚಿನ್ನದ ಲೇಪನದ ಬಗ್ಗೆ ಮಾತ್ರ ನಿರ್ಧಾರ ತೆಗೆದುಕೊಂಡಿದೆ, ಯಾತ್ರಿಕರ ದರ್ಶನಕ್ಕೆ ಯಾವುದೇ ಸಮಸ್ಯೆ ಇಲ್ಲʼ ಎಂದು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಹೇಳಿದ್ದಾರೆ.
ಆರರಿಂದ ಎಂಟು ತಿಂಗಳ ಕಾಲ ಚಿನ್ನದ ಲೇಪನ ಕಾರ್ಯದಲ್ಲಿ ದರ್ಶನ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಆಗಮ ತಜ್ಞರು ಮತ್ತು ಅರ್ಚಕರೊಂದಿಗೆ ಟಿಟಿಡಿ ಚರ್ಚಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!