Sunday, February 28, 2021

Latest Posts

ಮೀಸಲಾತಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ: ಎಚ್.ಡಿ. ದೇವೇಗೌಡ ಸ್ಪಷ್ಟನೆ

ಹೊಸದಿಗಂತ ವರದಿ, ಮಂಡ್ಯ :

ಎಲ್ಲಾ ಜಾತಿ ಜನಾಂಗದವರೂ ಮೀಸಲಾತಿಗೆ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಅಮರಾವತಿ ಹೊಟೇಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಪಂಚಮಸಾಲಿ, ನಾಯಕರು, ಗೊಲ್ಲರು, ಕ್ಷತ್ರಿಯ ಸಮಾಜ ಸೇರಿದಂತೆ ಅನೇಕ ಸಮಾಜಗಳು ಹೋರಾಟ ಮಾಡುತ್ತಿವೆ. ಎಲ್ಲಾ ಜಾತಿಯವರೂ ಮೀಸಲಾತಿ ಬೇಕೆಂದು ಕೇಳುತ್ತಿದ್ದಾರೆ. ಹೀಗಾಗಿ ನಾನು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಒಕ್ಕಲಿಗರ ಮೀಸಲಾತಿ ಕಿತ್ತುಹಾಕಿದವರು ದೇವೇಗೌಡರು ಎಂದು ಎ. ಮಂಜು ಆರೋಪ ಮಾಡುತ್ತಾರೆ ಎಂಬ ಪ್ರಶ್ನೆನಗೆ ತುಂಬಾ ಸಂತೋಷ, ಅದನ್ನು ಅವರು ಸರಿಪಡಿಸಲು ಎಂದಷ್ಟೇ ಹೇಳಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!