ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಾರದ ಏಳು ದಿನವೂ ಸಿಗುತ್ತಿದ್ದ ಕೋವಿಡ್ ವ್ಯಾಕ್ಸಿನ್ ಇನ್ಮುಂದೆ ಭಾನುವಾರ ಸಿಗುವುದಿಲ್ಲ. ಉಳಿದ 6 ದಿನ ಲಸಿಕೆ ನೀಡಲಾಗುತ್ತೆ.
ಹೌದು.. ಕರ್ನಾಟಕದಲ್ಲಿ ಇನ್ನು ಮುಂದೆ ಭಾನುವಾರ ಲಸಿಕೆ ಸಿಗುವುದಿಲ್ಲ. ಏಕೆಂದರೆ ಕೋವಿಡ್ ಲಸಿಕೆ ನೀಡುವ ಸಿಬ್ಬಂದಿಗೆ ಭಾನುವಾರ ರಜೆ ಪಡೆಯುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಯಾವುದೇ ರಜೆ ಇಲ್ಲದೇ, ನಿರಂತರವಾಗಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಾ ಇದ್ದರು. ಹೀಗಾಗಿ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗೆ ಭಾನುವಾರ ರಜೆ ನೀಡಲು ಇಲಾಖೆ ಚಿಂತಿಸಿದ್ದು, ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೋವಿಡ್ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲಿ ಈವರೆಗೂ 5,39,53,425 ಮಂದಿ ಲಸಿಕೆ ಪಡೆದಿದ್ದು, 3,82,73,672 ಮಂದಿ ಮೊದಲ ಡೋಸ್ ಪಡೆದಿದ್ದಾರೆ. 1,56,79,753 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.