ಮುಸ್ಲಿಂ ವಿದ್ಯಾವಂತರ‍್ಯಾರೂ ನಾಲ್ಕು ಬಾರಿ ಮದುವೆಯಾಗುವುದಿಲ್ಲ: ಕೇಂದ್ರ ಸಚಿವ ಗಡ್ಕರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮುಸ್ಲಿಂ ಸಮುದಾಯದಲ್ಲಿರುವ ಪ್ರಗತಿಪರ ಹಾಗೂ ವಿದ್ಯಾವಂತರ‍್ಯಾರೂ ನಾಲ್ಕು ಬಾರಿ ಮದುವೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ, `ಮುಸ್ಲಿಂ ಪುರುಷರು 3-4 ಮದುವೆಯಾಗುವ ವ್ಯವಸ್ಥೆ ಬದಲಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು’ ಎನ್ನುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗಡ್ಕರಿ, ನಾಲ್ವರು ಪತ್ನಿಯರನ್ನು ಹೊಂದುವುದು ಅಸ್ವಾಭಾವಿಕ ಎಂದು ಹೇಳಿದ್ದಾರೆ.

ಎರಡು ನಾಗರಿಕ ಸಂಹಿತೆ ಹೊಂದಿದ ಮುಸ್ಲಿಂ ರಾಷ್ಟ್ರ ಯಾವುದಾದರೂ ಇದೆಯೇ? ಒಬ್ಬ ಪುರುಷ ಓರ್ವ ಮಹಿಳೆಯನ್ನು ಮದುವೆಯಾದರೆ ಅದು ಸಹಜ. ಆದ್ರೆ ಒಬ್ಬ ಪುರುಷ ನಾಲ್ವರು ಮಹಿಳೆಯರನ್ನ ಮದುವೆಯಾದ್ರೆ ಅದು ಅಸಹಜ. ಮುಸ್ಲಿಂ ಸಮುದಾಯದಲ್ಲಿರುವ ಪ್ರಗತಿಪರ ಹಾಗೂ ವಿದ್ಯಾವಂತರ‍್ಯಾರೂ ನಾಲ್ಕು ಬಾರಿ ಮದುವೆಯಾಗುವುದಿಲ್ಲ. ಹಾಗೆಯೇ ಏಕರೂಪ ನಾಗರಿಕ ಸಂಹಿತೆ ಯಾವುದೇ ಒಂದು ಧರ್ಮಕ್ಕೆ ವಿರುದ್ಧವಾಗಿಲ್ಲ. ಅದು ರಾಷ್ಟ್ರದ ಅಭಿವೃದ್ಧಿಗಾಗಿ ಇದೆ. ಆದ್ದರಿಂದ ಸಂಹಿತೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೇ ಈ ದೇಶದ ಬಡವರಿಗೆ ಪ್ರಯೋಜನ ನೀಡುತ್ತದೆ ಎಂಬುದನ್ನು ನೋಡಬೇಕು ಎಂದು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!