Sunday, August 14, 2022

Latest Posts

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ: ಸಚಿವ ಜಗದೀಶ್ ಶೆಟ್ಟರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಲಬುರಗಿ:

ನಾಯಕತ್ವ ಬದಲಾವಣೆ ಬರೀ ಉಹಾಪೋಹ ಅಷ್ಟೇ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆ ಬಗ್ಗೆ ಎದ್ದಿರುವ ಮಾತುಗಳು ಬರೀ ಉಹಾಪೋಹ ಅಷ್ಟೇ, ಪಕ್ಷದ ಹೈಕಮಾಂಡ್ ಸ್ಪಷ್ಟವಾಗಿ ಹೇ಼ಳಿದೆ, ಯಡಿಯೂರಪ್ಪ ಆವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.

ಕೇಂದ್ರದ ಉಸ್ತುವಾರಿ ಗಳು ಸಹ ಈಗಾಗಲೇ ಈ ವಿಷಯದ ಬಗ್ಗೆ ಮಾತನಾಡಿದ್ದು, ನಾನು ಹೆಚ್ಚೆನೂ ಹೇಳಲಾರೆ ಎಂದರು. ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸುದ್ದಿ ಯಾರ ಹಬ್ಬಿಸುತ್ತಿದ್ದಾರೆ ಎನ್ನುವುದು ನನಗೂ ಗೊತ್ತಾಗುತ್ತಿಲ್ಲ ಎಂದರು. ಈ ರೀತಿ ಬರೀ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದರೇ, ಅಭಿವೃದ್ಧಿ ಕಾಯ೯ಕ್ಕೆ ಹೊಡೆತ ಬಿಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಇದರ ಜೊತೆಗೆ ಪಕ್ಷದಲ್ಲಿ ಸಹ ಗೊಂದಲ ಉಂಟಾಗುತ್ತದೆ ಎಂದರು.

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತಿಮಾ೯ನ ತೆಗೆದು ಕೊಳ್ಳುತ್ತದೆ. ಇದು ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ ಎಂದರು. ಕೈಗಾರಿಕಾ ಉದ್ಯಮಗಳು ಇನಮುಂದೆ ಬೆಂಗಳೂರು ಬಿಟ್ಟು ಹೊರಗೆ ಕೂಡ ಬರಲಿವೆ. ಬಹುತೇಕ ಕೈಗಾರಿಕಾ ಉದ್ಯಮಗಳು ಬೆಂಗಳೂರಿನಲ್ಲೆ ಇವೆ. ಇನಮುಂದೆ ಉತ್ತರ ಕರ್ನಾಟಕದ ಭಾಗದಲ್ಲಿ ಸಮೇತ ಕಾಣಲಿವೆ ಎಂದರು.

ಉತ್ತರ ಕರ್ನಾಟಕದ ಭಾಗದಲ್ಲಿ ಕೈಗಾರಿಕಾ ಉಧ್ಯಮ ಬರುವುದರಿಂದ ಇಲ್ಲಿಯ ಅಭಿವೃದ್ಧಿ ಸಹ ಆಗಲಿದೆ. ಈ ನಿಟ್ಟಿನಲ್ಲಿ ಕಾಯ೯ ಮಾಡಲಾಗುವುದು ಎಂದರು.

ಯಾದಗಿರಿ ಗೆ ಫಾಮಾ೯ ಪ್ರೋಜೆಕ್ಟಗಳು ಬಂದಿವೆ. 62 ಪ್ರೋಜೆಕ್ಟಗಳು ಪೂಣ೯ ಗೊಂಡಿವೆ.. ಅದರಲ್ಲಿ ಕಲಬುರಗಿ ಗೆ 511 ಕೋಟಿ ರೂಪಾಯಿ,ಯ 2 ಪ್ರೋಜೆಕ್ಟಗಳು ಬಂದಿವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss