ಊಟ ಬೇಡ ಸಿಗರೇಟ್‌ ಬೇಕು: ಮೊಬೈಲ್‌ ಟವರ್‌ ತುದಿಯೇರಿ ಕುಳಿತ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವ್ಯಕ್ತಿಯೊಬ್ಬ ಮೊಬೈಲ್‌ ಟವರ್‌ (Mobile Tower) ಏರಿ ಕಾಲು ಅಲ್ಲಾಡಿಸುತ್ತಾ ಆರಾಮವಾಗಿ ಕುಳಿತಿರುವ ಘಟನೆ ಧಾರವಾಡದ (Dharwad) ಆಲೂರು ವೆಂಕಟರಾವ್ ವೃತ್ತದ ಬಳಿ ನಡೆದಿದೆ.

ಇನ್ನು ಈತ ಮೇಲೆ ಯಾಕೆ ಏರಿದ್ದಾನೆ ಎಂದು ಕೇಳಿದಾಗ ಕಾರಣ ವಿಚಿತ್ರ ಅನಿಸಿದೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ವ್ಯಕ್ತಿಯ ಮನವೋಲಿಸುವ ಯತ್ನ ಮಾಡುವಾಗ ಊಟ ಕೊಡಲು ಹೇಳಿದ್ದು, ಆದ್ರೆ ಆತ ಬೇಡವೆಂದು ತನಗೆ ಸಿಗರೇಟ್‌ ಬೇಕೆಂದು ಪಟ್ಟುಹಿಡಿದ್ದಾನೆ .

ಸತತ ಮೂರು ಗಂಟೆಗಳ ಕಾಲ ಪೊಲೀಸರಿಗೆ ಆಟವಾಡಿಸಿದ ಈತ ಕೊನೆ ಪಿಕ್‌ಪಾಕೆಟರ್‌ ಎಂಬ ಸಂಗತಿ ಗೊತ್ತಾಗಿದೆ.
ಈತ ಮೊಬೈಲ್‌ ಟವರ್‌ ಏರಿ ಕುಳಿತಿದ್ದನ್ನು ನೋಡಿದ ಜನರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ, ಕೆಳಗೆ ಬರುವಂತೆ ಕೇಳಿದ್ದಾರೆ. ಆದರೆ, ಆತ ಕೆಳಕ್ಕಿಳಿಯಲು ಸಿದ್ಧನಿರಲಿಲ್ಲ. ಮೇಲೆ ಬಂದರೆ ಪ್ರಾಣ ಕಳೆದುಕೊಳ್ಳುವ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.

ಮೊದಲಿಗೆ ಈತ ಮಾನಸಿಕ ಅಸ್ವಸ್ಥನಿರಬೇಕು ಎಂದು ಭಾವಿಸಲಾಗಿತ್ತು. ಹೀಗಾಗಿ ನಾಜೂಕಾಗಿ ಆತನನ್ನು ಕೆಳಕ್ಕೆ ಇಳಿಸಲು ರಕ್ಷಣಾ ತಂಡ ಸಾಕಷ್ಟು ಶ್ರಮವಹಿಸಿತು. ಈ ಮಧ್ಯೆ ಆತನಿಗೆ ನೀರನ್ನು ಕೊಡಲಾಯಿತು. ನೀರನ್ನು ಆತ ಕುಡಿದ ಮೇಲೆ ಊಟವನ್ನೂ ಕೊಡಲಾಯಿತು. ಆದರೆ, ತನಗೆ ಊಟ ಬೇಡವೆಂದು ಅದನ್ನು ಕೆಳಕ್ಕೆ ಬಿಸಾಡಿದ. ಏನೇ ಕೇಳಿದರೂ ಸರಿಯಾಗಿ ಉತ್ತರಿಸದ ಆತ ಟವರ್‌ನ ತುದಿಯಲ್ಲಿ ಕುಳಿತುಕೊಂಡಿದ್ದರೂ ಆರಾಮವಾಗಿ ಕಾಲು ಅಲ್ಲಾಡಿಸುತ್ತಾ ಇದ್ದ ಎನ್ನಲಾಗಿದೆ.

ಈ ವೇಳೆ ಏನೇ ಹೇಳಿದರೂ ಕೆಳಗೆ ಇಳಿಯಲು ಒಲ್ಲೆ ಎಂದಿದ್ದಾನೆ. ಕೊನೆಗೆ ಸಿಗರೇಟ್‌ ಕೇಳಿದ್ದಾನೆ. ಅದನ್ನೂ ಕೊಡಲು ರಕ್ಷಣಾ ತಂಡ ಮುಂದಾಗಿದೆ. ಕೊನೆಗೆ ಹಾಗೂಹೀಗೂ ಆತನನ್ನು ಕೆಳಕ್ಕೆ ಇಳಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!