ಹೊಸದಿಗಂತ ಆನ್ಲೈನ್ ಡೆಸ್ಕ್:
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು,ಸಿಎಂಗಳು ಹಾಗೂ ಪ್ರಧಾನಿ ಮೋದಿ ಅವರ ಸಭೆಯಲ್ಲಿ ತಗೆದುಕೊಂಡಿರುವ ಪ್ರಮುಖ ನಿರ್ಧಾರಗಳ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಲಾಕ್ಡೌನ್,ಸೀಲ್ಡೌನ್ ಮಾಡುವುದಿಲ್ಲ. ನೈಟ್ ಕರ್ಫ್ಯೂ ಕೂಡ ಇಲ್ಲ ಎಂದಿದ್ದಾರೆ.
ಕೇಂದ್ರದಿಂದ ಕೊರೋನಾ ನಿಯಂತ್ರಣಕ್ಕೆ ಮೂರು ಪ್ರಮುಖ ಸಲಹೆ ನೀಡಿದ್ದು, ಈಗಿರುವ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.
ಸಾಮಾಜಿಕ ಅಂತರ,ಇನ್ಡೋರ್ ಕಾರ್ಯಕ್ರಮಗಳು ಹಾಗೂ ಸಿನಿಮಾ ಥಿಯೇಟರ್ಗಳಲ್ಲಿ ಈಗಿರುವ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಿದೆ.
ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಟೆಸ್ಟಿಂಗ್ ಕೂಡ ಹೆಚ್ಚಾಗುತ್ತದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮೂರು ಕೋವಿಡ್ ಸೆಂಟರ್ ತೆರೆಯುವ ನಿರ್ಧಾರದ ಬಗ್ಗೆಯೂ ಸಿಎಂ ಮಾಹಿತಿ ನೀಡಿದ್ದಾರೆ.
ಈಗಾಗಲೇ ಬಂದಿರುವ ಲಸಿಕೆ ಸರಿಯಾಗಿ ಜನರಿಗೆ ತಲುಪುವ ಬಗ್ಗೆ ಹಾಗೂ ಲಸಿಕೆ ಹಾಳಾಗದಂತೆ ಕಾಪಾಡುವ ಬಗ್ಗೆಯೂ ಪಿಎಂ ಮಾತನಾಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.