ಎಷ್ಟು ಪ್ರಯತ್ನಪಟ್ಟರೂ ಇಂದು ನಿಮ್ಮ ನೆರಳು ನಿಮಗೆ ಕಾಣೋದಿಲ್ಲ, ಯಾಕಂದ್ರೆ ಇಂದು ಶೂನ್ಯ ನೆರಳಿನ ದಿನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿ ಇಂದು ಹೊಸ ರೀತಿಯ ದಿನವೊಂದನ್ನು ಎದುರಿಸಲಿದ್ದಾರೆ. ಏನೇ ಮಾಡಿದರೂ, ಹೇಗೆ ನಿಂತು ನೋಡಿದರೂ ನಿಮ್ಮ ನೆರಳು ಇಂದು ನಿಮಗೆ ಕಾಣುವುದಿಲ್ಲ, ಏಕೆಂದರೆ ಇಂದು ಶೂನ್ಯ ನೆರಳು ದಿನ, ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದಾರೆ ಬೆಂಗಳೂರಿನ ಜನರು.

ದಿನದ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಬೆಳಕಿನಿಂದ ಯಾವುದೇ ನೆರಳು ಕಾಣುವುದಿಲ್ಲ. ಮಧ್ಯಾಹ್ನ 12:17 ಕ್ಕೆ ಸೂರ್ಯನ ಕಿರಣ ನೇರವಾಗಿ ನಿಮ್ಮ ಮೇಲೆ ಬಿದ್ದರೂ ನಿಮ್ಮ ನೆರಳು ಮಾತ್ರ ಕಾಣುವುದಿಲ್ಲ.

ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಶೂನ್ಯ ನೆರಳಿನ ದಿನ ಎದುರು ಬರುತ್ತದೆ. ಈ ಸಮಯದಲ್ಲಿ ನಿಮ್ಮ ನೆರಳು ನೇರವಾಗಿ ನೆತ್ತಿ ಮೇಲೆ ಬೀಳುತ್ತದೆ ಹಾಗಾಗಿ ನಿಮ್ಮ ನೆರಳು ಭೂಮಿಗೆ ತಾಗುವುದಿಲ್ಲ. ಈ ಅಪರೂಪದ ಕ್ಷಣಕ್ಕೆ ಬೆಂಗಳೂರಿನ ಜನರು ಸಾಕ್ಷಿಯಾಗಲಿದ್ದಾರೆ.

ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ವರ್ಷಕ್ಕೆ ಒಂದೊಂದು ಬಾರಿ ಈ ವಿದ್ಯಮಾನ ನಡೆಯುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವಿನ ಜನರು ಇದರ ಅನುಭವ ಪಡೆಯಬಹುದಾಗಿದೆ. ಮತ್ತೆ ಆಗಸ್ಟ್ ೧೮ರಂದು ಶೂನ್ಯ ನೆರಳಿನ ದಿನದ ಅನುಭವ ಪಡೆಯಬಹುದಾಗಿದೆ.

ಈ ಅಪರೂಪದ ವಿದ್ಯಮಾನದ ಬಗ್ಗೆ ಜನರಿಗೆ ಇನ್ನಷ್ಟು ಮಾಹಿತಿ ನೀಡಲು ಹಾಗೂ ಶೂನ್ಯ ನೆರಳಿನ ಅನುಭವವನ್ನು ಕಣ್ತುಂಬಿಕೊಳ್ಳಲು ಕೋರಮಂಗಲದಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!