ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಂಡತಿಯ ಬಣ್ಣ ಕಪ್ಪು ಎಂದು ಜರಿದ ಪತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ.
ಕಲಬುರಗಿಯ ಜೇವರ್ಗಿಯಲ್ಲಿ ಫರ್ಜಾನಾ ಬೇಗಂ ಅವರನ್ನು ಪತಿ ಖಾಜಾ ಪಟೇಲ್ ಕತ್ತು ಹಿಸುಕಿ ಕೊಂದಿದ್ದಾನೆ. ಏಳು ವರ್ಷದಿಂದ ದಾಂಪತ್ಯ ಜೀವನದಲ್ಲಿದ್ದರು. ಪತ್ನಿ ಬಣ್ಣ ಕಪ್ಪು ಹಾಗೂ ಆಕೆ ವರದಕ್ಷಿಣೆ ತಂದಿಲ್ಲ ಎಂದು ಖಾಜಾ ಆಕೆಗೆ ಕಿರುಕುಳ ನೀಡುತ್ತಿದ್ದ. ಪೌಡರ್ ಡಬ್ಬಿಗಳನ್ನು ತಂದುಕೊಟ್ಟು ಹಚ್ಚಿಕೊಂಡು ಬೆಳ್ಳಗಾಗುವಂತೆ ಹೇಳುತ್ತಿದ್ದ ಎನ್ನಲಾಗಿದೆ.
ಫರ್ಜಾನ ಬೇಗಂ ಪತಿ ಖಾಜಾ ಪಟೇಲ್ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.