ಯಾರು ಏನೇ ಅಪಪ್ರಚಾರ ಮಾಡಿದ್ರೂ ನನ್ನನ್ನು ಗೆಲ್ಲಿಸಿದ್ದೀರಿ, ಪ್ರಲ್ಹಾದ ಜೋಶಿ ಫಸ್ಟ್‌ ರಿಯಾಕ್ಷನ್‌

ದಿಗಂತ ವರದಿ ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ನನ್ನ ಮೇಲೆ ಅಪಪ್ರಚಾರದ ಪರಾಕಾಷ್ಠೆ ಮಿತಿ ಮೀರಿತ್ತು. ಅಷ್ಟಾದರೂ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಧಾರವಾಡ ಕೃಷಿ ವಿವಿಯಲ್ಲಿ ಚುನಾವಣಾ ಮತ ಎಣಿಕೆ ಕೇಂದ್ರ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ವಿಚಾರಗಳ ಬಿಟ್ಟು ಹಾಗೂ ತಮ್ಮ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಿಂತ ನನ್ನ ಮೇಲೆ ಅಪ್ರಚಾರವೇ ಹೆಚ್ಚು ಮಾಡಿದರು ಎಂದು ಹರಿಹಾಯ್ದರು.

ರಾಜ್ಯ ಸರ್ಕಾರ ಮಿಷನರಿ ಬಳಸಿಕೊಂಡು ಹಣ, ಹೆಂಡ ಇನ್ನಿತರ ಆಮಿಷ ವೊಡ್ಡಿದರು ಸಹ ಕ್ಷೇತ್ರದ ಜನ ಆಯ್ಕೆ ಮಾಡಿದರು. ರಾಜ್ಯದಲ್ಲಿಯೂ ಸಹ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.

ದೇಶದಲ್ಲಿ ಬಿಜೆಪಿ ಹಿನ್ನಡೆಯಾಗಿದ್ದರು ಸಹಿತ ನಾವು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಎನ್ ಡಿಎ 300 ಸ್ಥಾನ ಗೆಲವು ಸಾಧಿಸಲಿದ್ದೇವೆ. ಜನರು ಎನ್ ಡಿಎ ಆಡಳಿತ ಮಾಡಲು ಆಶೀರ್ವದಿಸಿದ್ದು, ಆದರೆ ನಿರೀಕ್ಷೆ ತಕ್ಕಂತೆ ಸ್ಥಾನ ಗೆದ್ದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎನ್ ಡಿಎ ಕಡಿಮೆ ಸ್ಥಾನಗಳಲ್ಲಿ ಗೆದ್ದಿರುವ ಬಗ್ಗೆ ರಾಷ್ಟ್ರೀಯ ನಾಯಕರು ಆತ್ಮವಲೋಕ ಮಾಡಿಕೊಂಡು ಮುಂದೆ ಸರಿಪಡಿಸಿಕೊಳ್ಳುತ್ತೇವೆ. ಹಿಂದೆ ಮೋದಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ್ದರು. ಉತ್ತಮವಾಗಿ ನಿಭಾಯಿಸಿದ್ದೇನೆ. ಈಗ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟಿದ್ದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!