ಇನ್ನು 12 ಗಂಟೆ ಲೋಡ್‌ಶೆಡ್ಡಿಂಗ್ : ಕತ್ತಲು ಹೊದ್ದುಕೊಂಡಿವೆ ಸಿಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ‘ಕತ್ತಲು’ ಕವಿದಿದೆ.
ಇಂಧನ ಕೊರತೆಯಿಂದಾಗಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲವಾದ ಕಾರಣ, ಪಾಕ್‌ನಲ್ಲಿ ಲೋಡ್ ಶೆಡ್ಡಿಂಗ್ ಅವಧಿಯನ್ನು ಬರೋಬ್ಬರಿ 12 ಗಂಟೆಗಳಿಗೆ ಏರಿಕೆ ಮಾಡಲಾಗಿದೆ.
ದೇಶವನ್ನು ಈ ಸಂಕಷ್ಟದ ಪರಿಸ್ಥಿತಿಯಿಂದ ಹೊರತರಲು ನೂತನ ಪ್ರಧಾನಿ ಶೆಹಬಾಝ್ ಶರೀಫ್ ಹೆಣಗಾಡುತ್ತಿದ್ದು,  ವಿದ್ಯುತ್ ಕೊರತೆ ನೀಗಿಸಲು ತೈಲ ಖದೀದಿಸುವುದು ಕೂಡಾ ದುಬಾರಿ ಎಂದು ಕೈಚೆಲ್ಲಿದ್ದಾರೆ.
ದೇಶದ ಹಲವು ಕಚೇರಿಗಳಿಗೆ ವರ್ಕ್ ಫ್ರಂ ಹೋಮ್ ಕಡ್ಡಾಯ, ವಿವಾಹ ಸಮಾರಂಭ ರಾತ್ರಿ 10ಗಂಟೆಯೊಳಗೆ ಮುಕ್ತಾಯಗೊಳಿಸಲು ಆದೇಶ, ನಿರ್ದಿಷ್ಟ ಸಮಯದವರೆಗೆ ಬೀದಿ ದೀಪ ಆರಿಸಲು ಕ್ರಮ, ಹವಾನಿಯಂತ್ರಣ ಸಾಧನಗಳ ಬಳಕೆಗೆ ನಿರ್ಬಂಧ ಸೇರಿದಂತೆ ಹಲವು ಆದೇಶಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಅದಾಗ್ಯೂ ಇಂಧನ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ. ಇದರಿಂದಾಗಿ ಈಗ ಲೋಡ್‌ಶೆಡ್ಡಿಂಗ್ ಅವಧಿ ಹೆಚ್ಚಳ ಮಾಡಲಾಗಿದ್ದು, ಇಸ್ಲಾಮಾಬಾದ್ ಸೇರಿದಂತೆ ಪಾಕಿಸ್ತಾನದ ಹಲವು ನಗರಗಳು ಕತ್ತಲು ಹೊದ್ದುಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!