ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ: ಪುಟಿನ್ ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ದಿನದಿಂದ ದಿನಕ್ಕೆ ಉಕ್ರೇನ್ ವಿರುದ್ಧದ ಸಮರವನ್ನು ಹೆಚ್ಚಿಸುತ್ತಿರುವ ಪುಟಿನ್ ಮನಸ್ಸು ಬದಲಿಸಿದಂತಿದೆ ಈ ಹೇಳಿಕೆ. ಉಕ್ರೇನ್ ಮೇಲಿನ ಕ್ಷಿಪಣಿ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದು, ರಷ್ಯಾ ಇನ್ನು ಮುಂದೆ ಉಗ್ರ ದಾಳಿ ನಡೆಸುವುದಿಲ್ಲ ಎಂದು ಪುಟಿನ್ ಬಹಿರಂಗಪಡಿಸಿದ್ದಾರೆ.

ಕೆರ್ಚ್ ಸೇತುವೆಯ ಮೇಲಿನ ಸ್ಫೋಟದ ಬಳಿಕ ರಷ್ಯಾ ಉಕ್ರೇನ್ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿತ್ತು. ಹತ್ತಾರು ಕ್ಷಿಪಣಿಗಳು ಉಡಾಯಿಸಿ ಉಕ್ರೇನ್‌ನ ಅನೇಕ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿ, ಸಾಕಷ್ಟು ಪ್ರಾಣಹಾನಿ ಸಂಭವಿಸಿತ್ತು. ಇದರಿಂದ ರಷ್ಯಾದ ಮೇಲೆ ಟೀಕೆಗಳ ಮಹಾಪೂರವೇ ಹರಿದು ಬಂದಿತ್ತು. ಐರೋಪ್ಯ ಒಕ್ಕೂಟವು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಪುಟಿನ್ ಯುದ್ಧಾಪರಾಧ ಎಸಗುತ್ತಿದ್ದಾರೆ ಎಂದು ಹೇಳಿದೆ ಟೀಕಿಸಿತು. ಈ ಎಲ್ಲ ಬೆಳವಣಿಗೆಗೆಳ ಬೆನ್ನಲ್ಲೇ ಪುಟಿನ್‌ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

ಈ ವಿಚಾರವಾಗಿ ಮಾತನಾಡಿದ ಪುಟಿನ್, ಉಕ್ರೇನ್ ನಾಶ ಮಾಡುವುದು ತಮ್ಮ ಗುರಿಯಲ್ಲ, ಹಾಗಾಗಿ ಕ್ಷಿಪಣಿ ದಾಳಿಯನ್ನು ನಿಲ್ಲಿಸುತ್ತಿದ್ದೇವೆ ಎಂದರು. ಪುಟಿನ್ ಅವರ ಈ ಘೋಷಣೆಯೊಂದಿಗೆ ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಕಡಿಮೆಯಾಗುವ ಸೂಚನೆಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!