ಜಾತಿ ಹಾಗೂ ವ್ಯಕ್ತಿಗಳ ಬಗ್ಗೆ ಪರಸ್ಪರ ಟೀಕೆ ಅನವಶ್ಯಕ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚುನಾವಣೆ ಸಮೀಪಿಸುತ್ತಿರುವುದರಿಂದ ಜಾತಿ ಹಾಗೂ ವ್ಯಕ್ತಿಗಳ ಬಗ್ಗೆ ಪರಸ್ಪರ ಟೀಕೆ ಮಾಡವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಬ್ರಾಹ್ಮಣರ ಬಗ್ಗೆ ಎಚ್ .ಡಿ. ಕುಮಾರಸ್ವಾಮಿಯವರ ಅವಹೇಳನಕಾರಿ ಹೇಳಿಕೆ ಕುರಿತು ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ಬಹಳ ಅನುಭವಿರುವ ರಾಜಕಾರಣಿಯಾದ‌ ಕುಮಾರಸ್ವಾಮಿ ಅವರು ಯಾಕೆ ಹೀಗೆ ಮಾತನಾಡಿದ್ದಾರೆ ಎಂದು ನನಗೆ ಗೋತ್ತಿಲ್ಲ. ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಈ ರೀತಿಯಾದ ಟೀಕೆ ಟಿಪ್ಪಣಿಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಬಿಜೆಪಿ‌ ರಾಷ್ಟ್ರೀಯ ಪಕ್ಷವಾಗಿದ್ದು, ಸಿಎಂ ಯಾರು ಆಗಬೇಕು ಎಂಬುದರ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತವೆ. ವೈಯಕ್ತಿಕವಾದ ವಿಚಾರ ಹಾಗೂ ವ್ಯಕ್ತಿ ಬಗ್ಗೆ ಈ ರೀತಿ ಮಾತನಾಡುವುದು ಅಪ್ರಸ್ತುತ ಎಂದು ಹೇಳಿದರು.

ಕೆ.ಎಚ್. ಪಾಟೀಲ ಅವರ ಪುತ್ಥಳಿ ಸ್ಥಳಾಂತರ ವಿಚಾರದಲ್ಲಿ ಅಧಿಕಾರಿಗಳು ಅವರ ಪ್ರತಿಷ್ಠಾನದ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಿತ್ತು. ಫ್ಲೈಓರ್ ಕಾಮಗಾರಿ ಹಿನ್ನೆಲೆ ಬಸವೇಶ್ವರ ಹಾಗೂ ಕೆ.ಎಚ್. ಪಾಟೀಲ ಅವರ ಪುತ್ಥಳಿ ಸ್ಥಳಾಂತರಿಸಲಾಗಿದೆ‌. ಕಾಮಗಾರಿ ಮುಗಿದ ಬಳಿಕ ಅಲ್ಲೇ ಮರಳಿ ಪ್ರತಿಷ್ಠಾಪಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!