ಆರ್‌ಎಸ್‌ಎಸ್ ಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ: ಸಿ.ಟಿ.ರವಿ

ಹೊಸದಿಗಂತ ವರದಿ,ಮೈಸೂರು:

ಆರ್‌ಎಸ್‌ಎಸ್ ಭಯೋತ್ಪಾಧಕ ಸಂಘಟನೆ ಎಂದು ಆರೋಪಿಸುತ್ತಿರುವ ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನಸ್ಸಿನ ದೃಷ್ಠಿದೋಷವಿದೆ. ಹಾಗಾಗಿ ಅವರು ತಮ್ಮ ಸುತ್ತಲೂ ಭಯೋತ್ಪಾದಕತೆಗೆ ಬೆಂಬಲ ಕೊಡುವವರೇ ತುಂಬಿಕೊoಡಿದ್ದರೂ, ಆ ಬಗ್ಗೆ ನೋಡದೆ ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದರು.
ಗುರುವಾರ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ನೂರಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ. ಲಾಭವಿಲ್ಲದೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮೂಲಕ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದೆ. ಆರ್‌ಎಸ್‌ಎಸ್ ಸೇವೆ, ತಪಸ್ಸು, ಸಮಾಜಕ್ಕಾಗಿ ದುಡಿಯುವ ಪ್ರಚಾರಕರನ್ನು ಒಳಗೊಂಡಿರುವ ಸಂಘಟನೆಯಾಗಿದೆ. ಅಲ್ಲಿ ಯಾವುದೇ ಜಾತಿಯಿಲ್ಲ. ಯಾರೂ ಬೇಕಾದರೂ ಸಂಘಟನೆಗೆ ಸೇರಿಕೊಂಡು, ಕೆಲಸ ಮಾಡಿ, ದೇಶ, ಸಮಾಜ ಸೇವೆ ಮಾಡಬಹುದು. ಅಂತಹ ಸಂಘಟನೆಯ ಬಗ್ಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ಒಂದು ಆನೆಯಿದ್ದಂತೆ, ಅದು ತನ್ನ ಸೇವೆಯ ಹಾದಿಯಲ್ಲಿ ನಿರಂತರವಾಗಿ ಸಾಗುತ್ತಿರುತ್ತದೆ. ದಾರಿಯಲ್ಲಿ ಅದನ್ನು ನೋಡಿ ಕೆಲವು ಪ್ರಾಣಿಗಳು ವಿಚತ್ರವಾಗಿ ವರ್ತಿಸಿದರೆ, ಅದರ ಬಗ್ಗೆ ಸಂಘ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದರು.
ನಮ್ಮನ್ನು ಕೋಮುವಾದಿಗಳು ಎಂದು ಆರೋಪಿಸುತ್ತಾರೆ. ಈ ರೀತಿ ಆರೋಪಿಸುವವರ ಮನಸ್ಥಿತಿ ನಾನು ಕಳ್ಳ, ಪರರನ್ನು ನಂಬೆ ಎಂಬAತಿದೆ. ಸಿದ್ದರಾಮಯ್ಯ ಸುತ್ತಲೂ ಭಯೋತ್ಪಾದಕತೆಗೆ ಬೆಂಬಲ ಕೊಡುವವರೇ ತುಂಬಿಕೊoಡಿದ್ದಾರೆ.
ಕೆಲ ವರ್ಷಗಳ ಹಿಂದೆ ನಿಮ್ಮದೇ ಶಾಸಕರ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳಿಗೆ ನಿಮ್ಮ ಬೆಂಬಲಿಗರೇ ಜಾಮೀನು ಕೊಡಿಸಿದ್ದು ಡಾಳಾಗಿ ಕಾಣಿಸುತ್ತಿದೆ. ಸುಖಾ ಸುಮ್ಮನೆ ಆರೆಸ್ಸೆಸ್ ಬಗ್ಗೆ ಮಾತನಾಡುವ ಅವರಿಗೆ ದೃಷ್ಟಿ ದೋಷವಿದೆ. ಜತೆಗೆ ವಯಸ್ಸಾಗುತ್ತಿರುವುದರಿಂದ ಚಿಕಿತ್ಸೆಯ ಅಗತ್ಯವೂ ಇದೆ. ಇಷ್ಟು ವರ್ಷ ರಾಜಕೀಯ ಜೀವನದಲ್ಲಿ ಇದ್ದರೂ ದೇಶಕ್ಕೆ ಒಳ್ಳೆಯ ಸಂಗತಿ ಯಾವುದು, ಕೆಟ್ಟದ್ದು ಯಾವುದು ಎಂದು ಎಂದು ತಿಳಿಯುವಷ್ಟು ಪಕ್ವತೆಯ ಮನಸ್ಸು ನಿಮ್ಮಲ್ಲಿ ಇಲ್ಲವಲ್ಲ ಎಂಬ ಬೇಸರ ಇದೆ ಲೇವಡಿ ಮಾಡಿದರು.
ಆರ್ ಎಸ್ ಎಸ್ ಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ದೇಶದ ಜನರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ದೇಶ ಭಕ್ತ ಸಂಘಟನೆ ಎಂಬುದನ್ನು ಆರ್ ಎಸ್ ಎಸ್ ಹಲವಾರು ಬಾರಿ ಸಾಬೀತು ಮಾಡಿದೆ. ಆರ್‌ಎಸ್‌ಎಸ್ ಬಗ್ಗೆ ಒಂದು ಆರೋಪ ಹೊರಿಸಲು ಯಾವುದಾದರೂ ಒಂದು ಆಧಾರ ನಿಮ್ಮಲ್ಲಿ ಇದ್ದರೆ ತೋರಿಸಬಹುದು. ಅಲ್ಪಸಂಖ್ಯಾತರ ಓಲೈಕೆಗಾಗಿ ಆರ್‌ಎಸ್‌ಎಸ್‌ನ್ನು ಟೀಕಿಸುತ್ತಿರುವ ಸಿದ್ದರಾಮಯ್ಯ ಅವರು ಈಗಲಾದರೂ ಸುಳ್ಳು ಹೇಳುವುದನ್ನ ಬಿಡಬೇಕು. ಮುಂದೊoದು ದಿನ ತಮ್ಮ ತಪ್ಪಿನ ಅರಿವಾಗಿ ಆಗ ಪಶ್ಚಾತ್ತಾಪ ಪಟ್ಟು ತಪ್ಪನ್ನು ಸರಿಪಡಿಸಿಕೊಳ್ಳಲಿದ್ದಾರೆ. ವಯಸ್ಸಾಗಿರುವ ಅವರ ಮನಸ್ಸಿನ ದೃಷ್ಟಿದೋಷಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಮುಂದೆ ಅವರು ಆರೆಸ್ಸೆಸ್‌ನ್ನು ಪ್ರಶಂಸಿಸುವ ಕಾಲ ದೂರವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮೈಸೂರು ನಗರ ಅಧ್ಯಕ್ಷ ಟಿ.ಎಸ್ ಶ್ರೀವತ್ಸ, ರಾಜ್ಯ ವಕೀಲರ ಪ್ರಕೋಷ್ಠದ ಸಂಚಾಲಕ ವಿವೇಕ್ ರೆಡ್ಡಿ, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಪ್ರತಾಪ್ ದೇವನೂರು, ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯ ನಿಂಗರಾಜು, ಮೈಸೂರು ನಗರ ಬಿಜೆಪಿ ವಕ್ತಾರ ಎಂ.ಎ. ಮೋಹನ್, ಮಾಧ್ಯಮ ಪ್ರಮುಖ್ ಮಹೇಶ್ ರಾಜೇ ಅರಸ್, ಸಹ ವಕ್ತರ ಕೇಬಲ್ ಮಹೇಶ್, ಮಾಧ್ಯಮ ಸಹ ಸಂಚಾಲಕ ಎನ್. ಪ್ರದೀಪ್ ಕುಮಾರ್, ಚಿತ್ರನಟರಾದ ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್‌ಗೌಡ ಮತ್ತಿತರರು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!