ಹೊಸ ದಿಗಂತ ವರದಿ,ಚಿಕ್ಕಮಗಳೂರು:
ಮಕ್ಕಳ ಆಹಾರ ವಿಚಾರವನ್ನು ತಾಯಿಗೆ ಬಿಡಬೇಕು. ತಾಯಿಗಿಂತ ಮಕ್ಕಳನ್ನು ಯಾರೂ ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಿಸಿದರು.
ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊಟ್ಟೆ ಬದಲಿಗೆ ಮಗುವಿನ ತಾಯಿಗೆ ಹಣ ಕೊಟ್ಟರೆ ಇನ್ನೂ ಚೆನ್ನಾಗಿ ಆಹಾರವನ್ನು ನೀಡಲು ಸಾಧ್ಯವಾಗಬಹುದು. ಈ ಬಗ್ಗೆಯೂ ಚರ್ಚೆ ಆಗಬೇಕು ಎಂದು ಹೇಳಿದರು.
ಆಹಾರ ಪದ್ಧತಿ ಅವರವರ ಆಯ್ಕೆ, ಇದಕ್ಕೆ ಒತ್ತಡ ತರುವುದು ಸರಿಯಲ್ಲ. ಮೊಟ್ಟೆ ಕೊಡುವುದರಿಂದ ಕೆಲ ಸಮಾಜಕ್ಕೆ ನೋವು ತರುತ್ತದೆ ಎನ್ನುವುದಾದರೆ ಸರ್ಕಾರ ಮರುಪರಿಶೀಲನೆ ಮಾಡಬೇಕು. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.