ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಅಮೌಂಟ್ ಗೆದ್ದ ಲಾಟರಿ ಇಲ್ವೇ ಇಲ್ಲ, ಹೌದು, ಅಮೆರಿಕದ ಎಡ್ವಿನ್ ಕ್ಯಾಸ್ಟ್ರೋ ಪವರ್ಬಾಲ್ ಜಾಕ್ಪಾಟ್ ಗೆದ್ದಿದ್ದು, ಬರೋಬ್ಬರಿ ೧೬,೫೯೦ ಕೋಟಿ ರೂಪಾಯಿ ಪಡೆದಿದ್ದಾರೆ.
ಅಮೆರಿಕ ಇತಿಹಾಸದಲ್ಲಿ ಇಷ್ಟೊಂದು ಹಣ ಲಾಟರಿಯಲ್ಲಿ ಸಿಕ್ಕಿದ್ದು ಇದೇ ಮೊದಲು. ಕಳೆದ ವರ್ಷ ಕ್ಯಾಲಿಫೋರ್ನಿಯಾದ ಅಲ್ಟಾಡೆನಾದಲ್ಲಿ ಎಡ್ವಿನ್ ಲಾಟರಿ ಖರೀದಿ ಮಾಡಿದ್ರು. ಲಾಟರಿ ಅಧಿಕಾರಿಗಳು ಸುದ್ದಿಗೋಷ್ಠಿ ಮಾಡಿ, ಇಷ್ಟೊಂದು ಹಣ ಈವರೆಗೂ ಯಾರೂ ಗೆದ್ದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ಇಷ್ಟೊಂದು ಹಣ ಗೆದ್ದ ಎಡ್ವಿನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳೋದಕ್ಕೂ ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಶಾಕಿಂಗ್ ಹಾಗೇ ಖುಷಿಗೆ ಪಾರವೇ ಇಲ್ಲದಂತಾಗಿದೆ ಎಂದು ಎಡ್ವಿನ್ ಹೇಳಿದ್ದಾರೆ.