ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿದೆ ಎಂಬುದು ಕಾಂಗ್ರೆಸ್ ನಡೆಸುತ್ತಿರುವ ಸುಳ್ಳು ಹಾಗೂ ವದಂತಿಯಾಗಿದೆ ಎಂದು ಬಿಜೆಪಿ ಅಂಕಿ-ಅಂಶಗಳೊಂದಿಗೆ ಹೇಳಿದೆ. ಸುಳ್ಳುಗಳ ಮೂಲಕ ದೇಶದ ಜನತೆಗೆ ತಪ್ಪು ಮಾಹಿತಿ ತಲುಪಿಸುತ್ತಿರುವ ವಿಪಕ್ಷಗಳ ಷಡ್ಯಂತ್ರಕ್ಕೆ ಬಲಿಯಾಗದಿರೋಣ. ಕಾಂಗ್ರೆಸ್ ಹಿಂದೆಯೂ ದೇಶದ ಪರವಾಗಿ ನಿಂತಿಲ್ಲ, ಮುಂದೆಯೂ ನಿಲ್ಲುವುದಿಲ್ಲ ಎಂದು ಬಿಜೆಪಿ ಹೇಳಿದೆ.
ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿದೆ ಎಂಬುದು ಸತ್ಯವಲ್ಲ. ದಿನವಹಿ ದೇಶದಲ್ಲಿ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ 7,287ಎಂಟಿಎಸ್ ಆಗಿದ್ದು, ದೇಶದಲ್ಲೀಗ ಸಂಗ್ರಹವಿರುವ ಆಮ್ಲಜನಕ ಪ್ರಮಾಣ 50,000 ಎಂಟಿಎಸ್ ಆಗಿದೆ.ದೈನಂದಿನ ಬಳಕೆ ಪ್ರಮಾಣ 3,842ಎಂಟಿಎಸ್ ಆಗಿದೆ ಎಂದು ಬಿಜೆಪಿ ಅಕೃತ ಮಾಹಿತಿಗಳನ್ನುಲ್ಲೇಖಿಸಿ ಟ್ವೀಟ್ ಮಾಡಿದೆ. ಸುಳ್ಳುಗಳ ಮೂಲಕ ದೇಶದ ಜನತೆಗೆ ತಪ್ಪು ಮಾಹಿತಿ ತಲುಪಿಸುತ್ತಿರುವ ವಿಪಕ್ಷಗಳ ಷಡ್ಯಂತ್ರಕ್ಕೆ ಬಲಿಯಾಗದಿರೋಣ ಎಂಬುದಾಗಿ ಪಕ್ಷ ಜನತೆಯಲ್ಲಿ ಮನವಿ ಮಾಡಿಕೊಂಡಿರುವ ಬಿಜೆಪಿ , ಕೊರೋನಾ ವಿರುದ್ಧದ ಸಮರದಲ್ಲಿ ಒಟ್ಟಾಗಿ ಶ್ರಮಿಸೋಣ ಎಂದು ಕರೆಯಿತ್ತಿದೆ.