ಲೈಂಗಿಕತೆಯ ಒಪ್ಪಿಗೆ ವಯಸ್ಸನ್ನು ಇಳಿಸುವ ಯೋಜನೆ ಇಲ್ಲ: ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೈಂಗಿಕತೆಯ ಒಪ್ಪಿಗೆಯ ವಯಸ್ಸನ್ನು 18 ರಿಂದ ಕಡಿಮೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರವು ಸಂಸತ್ತಿಗೆ ತಿಳಿಸಿದೆ.

ಈ ವಯಸ್ಸನ್ನು 18 ರಿಂದ 16 ಕ್ಕೆ ಬದಲಾಯಿಸುವ ಬಗ್ಗೆ ರಾಜ್ಯಸಭೆಯಲ್ಲಿ ಸಿಪಿಐ ಎಂಬಿ ಬಿನೋಯ್ ವಿಶ್ವಂ ಅವರು ಪ್ರಶ್ನಿಸಿದ್ದರು. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಲಿಖಿತ ಉತ್ತರ ನೀಡಿದ್ದು, ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಪೋಸ್ಕೊ ಕಾಯಿದೆ 2012 ಅಡಿಯಲ್ಲಿ ವಯಸ್ಸು ನಿಗದಿಪಡಿಸಲಾಗಿದೆ. ಈ ಬಗ್ಗೆ ಪ್ರಶ್ನೆ ಉದ್ಭವಿಸುವುದೇ ಇಲ್ಲ ಎಂದು ಹೇಳಿದರು.

ಸರ್ಕಾರದ ನಿಲುವನ್ನು ದೃಢವಾಗಿ ಮಂಡಿಸಿದ ಕಾರಣ ಈ ಪ್ರತಿಕ್ರಿಯೆ ಮಹತ್ವ ಪಡೆದಿತ್ತು.  ಡಿ.11ರಂದು ಸಿಜೆಐ ಡಿವೈ ಚಂದ್ರಚೂಡ್ ಅವರು ಪೋಕ್ಸೊ ಕಾಯಿದೆ ಅನ್ವಯ ಒಪ್ಪಿಗೆಯ ವಯಸ್ಸಿನ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಪರಿಗಣಿಸಿ ಎಂದು ಶಾಸಕರನ್ನು ಒತ್ತಾಯಿಸಿದ್ದರು.

ಅಪ್ರಾಪ್ತ ವಯಸ್ಕರಲ್ಲಿ ವಾಸ್ತವಿಕವಾಗಿ ಸಮ್ಮತಿ ಇದೆಯೇ ಎಂಬುದನ್ನು ಕಾಯಿದೆ ಲೆಕ್ಕಿಸುವುದಿಲ್ಲ. 18 ವರ್ಷದೊಳಗಿನ ಎಲ್ಲಾ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದು ಕಾಯಿದೆ ಹೇಳುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಒಪ್ಪಿಗೆ ಇಲ್ಲದ ಲೈಂಗಿಕತೆ ಮಾತ್ರ ಇದೆ ಎನ್ನುವುದು ಕಾನೂನಿನ ಊಹೆಯಾಗಿದೆ ಎಂದು ಚಂದ್ರಚೂಡ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!