ಹೊಸದಿಗಂತ ವರದಿ, ವಿಜಯಪುರ:
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಉಳಿದಿಲ್ಲ, ಶಾಸಕರ ಪರಿಸ್ಥಿತಿನೇ ಹೀಗಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು.
ಸಿ.ಟಿ. ರವಿಗೆ ಬೆದರಿಕೆ ಪತ್ರ ವಿಚಾರ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಸುವರ್ಣಸೌಧದಲ್ಲಿ ಗೂಂಡಾಗಳು ಹೊಕ್ಕರು, ಅವರ ಹೆಸರು ಕೇಳಿದ್ದೀರಿ ಏನೇನು ಇದಾವೆ ಅಂತಾ. ಸುವರ್ಣಸೌಧದಲ್ಲಿ ಇಷ್ಟೊಂದು ಭದ್ರತೆ ಇದ್ದಾಗಲೇ ಒಳಗಡೆ ಬಂದರು. ಸಿ.ಟಿ. ರವಿ ಅವರ ಮೇಲೆ ಅಟ್ಯಾಕ್ ಮಾಡಬೇಕು ಅಂತಾ ಅಂತಾರೆ, ಕಾನೂನು ವ್ಯವಸ್ಥೆ ಎಲ್ಲಿದೆ ?, ಯಾವ ಅಧಿಕಾರಗಳನ್ನು ಸಸ್ಪೆಂಡ್ ಮಾಡಿದಿರಿ ? ಅವರನ್ನು ಹೇಗೆ ಬಿಟ್ಟರು, ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಗೊತ್ತಿರಲಿಲ್ಲ. ಈಗ ನೋಡಿ ಕಲಬುರಗಿಗೆ ವಿಜಯೇಂದ್ರ ಬರಲೇ ಇಲ್ಲ. ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟಕ್ಕೆ ವಿಜಯೇಂದ್ರ ಬರಲೇ ಇಲ್ಲ, ಅವರಿಗೂ ನಿಮ್ಮ ತಂದೆಯದು ಎಲ್ಲ ತಗೆಯುತ್ತೇವೆ ಅಂತಾ ಭಯ ಹಾಕಿರಬೇಕು ಎಂದರು.
ವಿಜಯೇಂದ್ರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ಅಂತಾ ಇಡಿ ಊರು ತುಂಬ ವಿಜಯೇಂದ್ರ ಹಿತೈಶಿಗಳು ದೊಡ್ಡ ಕಾರ್ಯಕ್ರಮ ಮಾಡಿದ್ದರು, ವಿಜಯೇಂದ್ರ ಯಾಕೆ ಬರಲಿಲ್ಲ. ಯಾಕೆಂದರೆ ಪ್ರಿಯಾಂಕ್ ಖರ್ಗೆ ಅವರಿಗೆ ಧಮ್ಕಿ ಕೊಟ್ಟ, ವಿಜಯೇಂದ್ರ ಏಕೆ ಬರಲಿಲ್ಲ ಗೊತ್ತಿಲ್ಲ. ಆದರೆ ಭಯ ಅಂತೂ ಹೊಕ್ಕಿಸಿಬಿಟ್ಟಿದ್ದಾರೆ ಎಂದರು.