ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದರೂ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯೇ ಇಲ್ಲ. ಇದರಿಂದ ಕನ್ನಂಬಾಡಿ ಒಡಲಲ್ಲಿ ನೀರಿನ ಮಟ್ಟ 89 ಅಡಿಗೆ ಕುಸಿತ ಕಂಡಿದೆ.
ದಿನೇ ದಿನೇ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ. ಇದರಿಂದ ಕಾವೇರಿ ನೀರಿಗೆ ಸಮಸ್ಯೆಯಾಗುವ ಭೀತಿ ಎದುರಾಗುತ್ತಿದೆ. ಮುಂಗಾರು ತಡವಾದ್ರೆ ಕುಡಿಯುವ ನೀರಿಗೆ ಸಹ ಕಂಟಕ ಎದುರಾಗುವ ಸಾಧ್ಯತೆ ಇದೆ.
ಸದ್ಯ ರಾಜ್ಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗು ಭಾಗದಲ್ಲಿ ಮಳೆ ಆಗುತ್ತಿಲ್ಲ. ಜೂನ್‍ನಲ್ಲಿಯೂ ಮುಂಗಾರು ಮಳೆ ತಡವಾದರೆ ನೀರಿಗೆ ಹಾಹಾಕಾರ ಎದುರಾಗಲಿದೆ.