Monday, August 8, 2022

Latest Posts

NO SMOKING DAY: ಸ್ಮೋಕಿಂಗ್ ನಿಲ್ಲಿಸೋಕೆ ಇಲ್ಲಿದೆ ಎಫೆಕ್ಟೀವ್ ಟಿಪ್ಸ್!

ಸ್ನೇಹಿತರ ಜೊತೆ ಸೇರಿ ಧಮ್ ಎಳೆಯೋ ಅಭ್ಯಾಸ ಮಾಡ್ಕೋಂಡಿದ್ದೀರಾ? ಯಾವುದೋ ಸಣ್ಣ ವಯಸ್ಸಿನಲ್ಲಿ ಕ್ರೇಜ್‌ಗಾಗಿ ಶುರುವಾಗಿದ್ದ ಸಿಗರೇಟ್ ಕಥೆ ಇದೀಗ ಕುತ್ತಿಗೆಗೇ ಬಂದಿರುತ್ತದೆ. ಸ್ಮೋಕ್ ಮಾಡಿ ಸಾಕಾಗಿ ಬಿಡಬೇಕು ಎಂದುಕೊಂಡರೂ ಅದನ್ನು ಬಿಡೋಕೆ ಸಾಧ್ಯ ಆಗೋದಿಲ್ಲ. ಯಾಕಂದ್ರೆ ಅದಕ್ಕೆ ನೀವು ಅಡಿಕ್ಟ್ ಆಗಿ ಬಿಟ್ಟಿರುತ್ತೀರ.. ಸ್ಮೋಕಿಂಗ್ ನಿಲ್ಲಿಸೋಕೆ ಇಲ್ಲಿದೆ ಎಫೆಕ್ಟೀವ್ ಟಿಪ್ಸ್

  • ನಿಲ್ಲಿಸೋಕೆ ಆಗ್ತಿಲ್ಲ ಯಾಕೆ?
    ಸ್ಮೋಕ್ ಮಾಡುವುದಕ್ಕೆ ಕಾರಣ ಇರುತ್ತದೆ. ಯಾವುದಾದರೂ ಒಂದು ವಿಷಯವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ ಅದಕ್ಕಾಗಿಯಾದರೂ ಸ್ಮೋಕಿಂಗ್ ಬಿಟ್ಟುಬಿಡಿ.
  • ಸಹಾಯ ಪಡೆಯಿರಿ
    ಸ್ಮೋಕ್ ಮಾಡುವುದನ್ನು ಅಷ್ಟು ಸುಲಭವಾಗಿ ನಿಲ್ಲಿಸಲು ಆಗುವುದಿಲ್ಲ. ನೀವು ಗಟ್ಟಿ ಮನಸ್ಸು ಮಾಡಿದ ಮೇಲೆ ಮಧ್ಯೆ ಬೇಡ ಸ್ಮೋಕ್ ಮಾಡೋಣ ಎನಿಸುತ್ತದೆ ಆಗ ಬ್ಯಾಕಪ್ ಪ್ಲಾನ್ ಇಟ್ಟುಕೊಳ್ಳಿ. ಆಪ್‌ಗಳು, ವೈದ್ಯರ ಬಳಿ ಸಲಹೆ ಪಡೆಯಿರಿ.
  • ಥೆರಪಿಗೆ ತೆರಳಿ
    ನಿಕೋಟಿನ್ ಸೇವನೆ ನಿಲ್ಲಿಸೋದು ಕಷ್ಟ. ನೀವು ಸಡನ್ ಆಗಿ ಸ್ಮೋಕ್ ಮಾಡೋದನ್ನು ನಿಲ್ಲಿಸಿದಾಗ ತಲೆನೋವು, ಮೂಡ್‌ನಲ್ಲಿ ಬದಲಾವಣೆ ಹೀಗೆ ಸಮಸ್ಯೆ ಬರುತ್ತದೆ. ಆದರೆ ಇದಕ್ಕೆಲ್ಲ ನೀವು ಕುಗ್ಗಬಾರದು. ಇಂಥ ಸಮಯದಲ್ಲಿ ಥೆರಪಿ ಪಡೆಯಿರಿ.
  • ಮಾತ್ರೆಗಳು
    ವೈದ್ಯರ ಬಳಿ ತೆರಳಿ ಅವರು ನೀಡಿದ ಮಾತ್ರೆ ಪಡೆಯಬಹುದು. ಯಾರು ಹೇಳಿದ ಮಾತ್ರೆಗಳನ್ನು ಪಡೆಯಬೇಡಿ. ವೈದ್ಯರ ಮಾತನ್ನು ಮಾತ್ರ ಕೇಳಿ.
  • ಸ್ನೇಹಿತರಿಗೆ ಹೇಳಿ
    ಸ್ನೇಹಿತರಿಗೆ ಕ್ವಿಟ್ ಮಾಡುವ ವಿಷಯ ಹೇಳಿ. ಅವರು ನಿಮ್ಮನ್ನು ಎನ್‌ಕರೇಜ್ ಮಾಡುತ್ತಾರೆ. ಅವರ ಜೊತೆ ಸಿಗರೇಟ್ ಬ್ರೇಕ್‌ಗೆ ನಿಮ್ಮನ್ನು ಕರೆಯುವುದಿಲ್ಲ.
  • ಬ್ರೇಕ್ ನೀಡಿ
    ಹೆಚ್ಚು ಮಂದಿ ಸ್ಟ್ರೆಸ್ಟ್‌ನಿಂದ ಸ್ಮೋಕ್ ಮಾಡುತ್ತಾರೆ. ಸ್ಮೋಕ್ ಮಾಡಲು ನಿಲ್ಲಿಸಿದಾಗ ನಿಮ್ಮ ಮೈಂಡ್ ಡೈವರ್ಶನ್ ಕೇಳುತ್ತದೆ. ಆಗ ಸಂಗೀತ, ಕಲೆ, ಪುಸ್ತಕ ಪೇಂಟಿಂಗ್ ಹೀಗೆ ಅಭ್ಯಾಸ ಬದಲಿಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss