ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಬಂದು, ಹೋಗಿ ಇದೀಗ ಕೊರೋನಾ ರೂಪಾಂತರಿ ಕೂಡ ಬಂದು ಎದುರು ನಿಂತಿದೆ.
ಈಗಲೂ ಹಳ್ಳಿಗಳಲ್ಲಿ ಜನ ವ್ಯಾಕ್ಸಿನ್ಗೆ ಹೆದರುತ್ತಿದ್ದಾರೆ. ಪಾಂಡಿಚೆರಿಯ ವಿಲ್ಲನೂರ್ ಗ್ರಾಮದಲ್ಲಿ ಆರೋಗ್ಯ ಕಾರ್ಯಕರ್ತರು ವ್ಯಾಕ್ಸಿನ್ ನೀಡಲು ಬಂದಾಗ ವ್ಯಕ್ತಿಯೊಬ್ಬ ಮರ ಏರಿ ಕುಳಿತಿದ್ದಾನೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
Vaccine hesitancy at its peak!
"I will not take the vaccine, you can't get me",says a 40 year old man after climbing a tree @ Puducherry when the health dept. workers insisted him to take the #COVID19 jab.#vaccination#CovidIndia pic.twitter.com/1a8B5MdZb1
— Sanjeevee sadagopan (@sanjusadagopan) December 28, 2021
ನಾನು ನಿಮ್ಮ ಕೈಗೆ ಸಿಗೋದಿಲ್ಲ, ಹೊರಟು ಹೋಗಿ, ನೀವು ಹೋಗೋತನಕ ನಾನು ಇಳಿಯೋದಿಲ್ಲ ಎಂದು ಮರ ಏರಿ ಕುಳಿತಿದ್ದಾನೆ. ಆರೋಗ್ಯ ಕಾರ್ಯಕರ್ತರು ಮನವೊಲಿಸಲು ಪ್ರಯತ್ನಿಸಿದ್ದು, ಅದು ವಿಫಲವಾಗಿ ಅಸಹಾಯಕರಂತೆ ನಿಂತು ಆತನನ್ನು ನೋಡುತ್ತಿದ್ದಾರೆ.
ಈಗಾಗಲೇ ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇದ್ದು, ವ್ಯಾಕ್ಸಿನ್ ಬಗ್ಗೆ ಇರುವ ಅಪನಂಬಿಕೆ ಹೊಡೆದೋಡಿಸುವುದು ಅವಶ್ಯವಾಗಿದೆ.