ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೇರಳದಲ್ಲಿ ವ್ಯಾಕ್ಸಿನ್, ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇಲ್ಲ: ಜನರ ಮುಂದೆ ಅಂಕಿ ಅಂಶ ತೆರೆದಿಟ್ಟ ಪಿಣರಾಯಿ ವಿಜಯನ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಪ್ರಮಾಣ ಹೆಚ್ಚುತ್ತಿದ್ದು, ಜೊತೆಗೆ ವ್ಯಾಕ್ಸಿನ್, ಆಕ್ಸಿಜನ್, ವೆಂಟಿಲೇಟರ್​​ಗಳ ಕೊರತೆ ಎದುರಾಗುತ್ತಿದೆ. ಈ ವೇಳೆ ತಮ್ಮ ಬಳಿ ಇರುವ ಸಂಪನ್ಮೂಲಗಳ ಮಾಹಿತಿಯನ್ನು ರಾಜ್ಯದ ಜನತೆಯ ಎದುರು ಬಿಚ್ಚಿಡುವುದು ಸರ್ಕಾರಗಳ ಕೆಲಸ.
ಹೀಗೆ ತಮ್ಮ ಬಳಿಯಿರುವ ಸಂಪನ್ಮೂಲಗಳ ಅಂಕಿ ಅಂಶಗಳನ್ನ ಪಾರದರ್ಶಕವಾಗಿಡುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಕೆಲಸವನ್ನು ಮಾಡಿದ್ದಾರೆ.
ಸದ್ಯ ಕೇರಳ ಸರ್ಕಾರದ ಬಳಿ 2,40,000 ಡೋಸ್ ವ್ಯಾಕ್ಸಿನ್ ಸ್ಟಾಕ್ ಇದ್ದು ಮುಂದಿನ ಎರಡು ದಿನಗಳವರೆಗೆ ವ್ಯಾಕ್ಸಿನೇಷನ್​ಗೆ ಚಿಂತೆಯಿಲ್ಲ. ಇಂದು 4 ಲಕ್ಷ ಡೋಸ್ ಕೋವಿಶೀಲ್ಡ್ ಹಾಗೂ 70,000 ಕೊವ್ಯಾಕ್ಸಿನ್ ಡೋಸ್​ ಬಂದಿಳಿಯುವ ನಿರೀಕ್ಷೆ ಇದೆ.
ಮೇ 3 ರವರೆಗೆ ಕೇರಳದಲ್ಲಿ 270.2 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಹಾಗೂ 8.97 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಸ್ಟಾಕ್ ಇದೆ. ನಮಗೆ ದಿನಕ್ಕೆ 108.35 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಇದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss