ನೋ ವರ್ಕ್ ಫ್ರಂ ಹೋಂ, 80 ಗಂಟೆ ಕೆಲಸ ಕಡ್ಡಾಯ: ಉದ್ಯೋಗಿಗಳಿಗೆ ಟಫ್ ರೂಲ್ಸ್ ಜಾರಿತಂದ ಎಲೋನ್ ಮಸ್ಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಎಲೋನ್ ಮಸ್ಕ್ ಉದ್ಯೋಗಿಗಳ ಒಂದರ ಮೇಲೆ ಒಂದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದು, ಈಗಾಗಲೇ ಕಂಪನಿಯ ಹೆಚ್ಚುವರಿ ಉದ್ಯೋಗಿಗಳನ್ನು ಕಡಿತಗೊಳಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಕಂಪನಿಯನ್ನು ಇನ್ನಷ್ಟು ಲಾಭದಾಯಕಗೊಳಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಈಗಾಗಲೇ ಅರ್ಧದಷ್ಟು ಉದ್ಯೋಗಿಗನ್ನು ವಜಾಗೊಳಿಸಿದ್ದಾರೆ. ಅದರಲ್ಲೂ ಹೆಚ್ಚಾಗಿ ಉನ್ನತ ಕಾರ್ಯನಿರ್ವಾಹಕರನ್ನೇ ಹೊರದಬ್ಬಿದ್ದಾರೆ. ಇದರೊಂದಿಗೆ ಉದ್ಯೋಗಳು ಇನ್ನು ಮನೆಯಿಂದ ಕೆಲಸ ಮಾಡುವುದನ್ನು ಬಿಟ್ಟು, ಕಚೇರಿಗೆ ಮರಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.

ಇದೀಗ ತನ್ನ ಉದ್ಯೋಗಿಗಳಿಗೆ ಹೊಸ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ ಮಸ್ಕ್ , ತನ್ನ ಉದ್ಯೋಗಿಗಳು ವಾರಕ್ಕೆ 80 ಗಂಟೆ ಕೆಲಸ ಮಾಡಬೇಕು. ಕಂಪನಿಯಲ್ಲಿ ಸಿಗುವ ಉಚಿತ ಆಹಾರವನ್ನು ಕಡಿತಗೊಳಿಸಲಾಗುವುದು ಮಾತ್ರವಲ್ಲದೇ ಇನ್ನು ಕೂಡಾ ವರ್ಕ್ ಫ್ರಂ ಹೋಂ (WFH) ಮಾಡುತ್ತಿರುವವರು ಕಡ್ಡಾಯವಾಗಿ ಕಚೇರಿಗೆ ಮರಳುವಂತೆ ತಿಳಿಸಿದ್ದಾರೆ.

ಉದ್ಯೋಗಿಗಳು ಕಂಪನಿಗಾಗಿ ಹೆಚ್ಚು ಶ್ರಮವಹಿಸಬೇಕು. ಕೊರೋನಾ ಕಳೆದಿದ್ದು, ಇನ್ನು ಕೂಡಾ ಕಂಪನಿಗೆ ಮರಳಲು ಬಯಸದೇ ಮನೆಯಲ್ಲೇ ಕೆಲಸ ಮಾಡುತ್ತಿರುವವರು ಕಂಪನಿಯನ್ನೇ ತೊರೆದಿರುವಂತೆ ಪರಿಗಣಿಸಲಾಗುವುದು ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!