spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೂವರು ತಜ್ಞರ ಮುಡಿಗೆ ಅರ್ಥಶಾಸ್ತ್ರ ವಿಭಾಗದ ನೊಬೆಲ್​ ಪ್ರಶಸ್ತಿ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

2021ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್​ ಪ್ರಶಸ್ತಿ ಪ್ರಕಟಗೊಂಡಿದ್ದುಮೂವರು ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಡೇವಿಡ್​​ ಕಾರ್ಡ್​, ಜೋಶುವಾ ಡಿ ಆಂಗ್ರಿಸ್ಟ್​​ ಹಾಗೂ ಗೈಡೋ ಡಬ್ಲೂ ಇಂಬೆನ್ಸ್​ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡೇವಿಡ್​ ಕಾರ್ಡ್​ ಅವರಿಗೆ ಅರ್ಧದಷ್ಟು ಹಣ ನೀಡಲು ನೊಬೆಲ್​ ಸಮಿತಿ ನಿರ್ಧಾರ ಮಾಡಿದ್ದು, ಉಳಿದ ಹಣ ಜೋಶುವಾ ಡಿ ಆಂಗ್ರಿಸ್ಟ್​​ ಹಾಗೂ ಗೈಡೋ ಡಬ್ಲೂ ಅವರಿಗೆ ನೀಡಲು ಮುಂದಾಗಿದೆ.
ಕಾರ್ಮಿಕ ಮಾರುಕಟ್ಟೆಯ ಬಗ್ಗೆ ಹೊಸ ಒಳನೋಟ ಹಾಗೂ ನೈಸರ್ಗಿಕ ಪ್ರಯೋಗಗಳ ಬಗ್ಗೆ ಸಂಶೋಧನೆ ಕೈಗೊಂಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ರಾಯಲ್​ ಸ್ವೀಡಿಷ್​ ವಿಜ್ಞಾನ ಅಕಾಡೆಮಿ ತಿಳಿಸಿದೆ.
ಅಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ತವಾಗಿ 1969ರಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಕಳೆದ ವರ್ಷ ರಾಬರ್ಟ್ಸ್ ವಿಲ್ಸನ್​ ಹಾಗೂ ಪೌಲ್​ ಮಿಲ್​ಗ್ರಾಮ್​ ಅವರು ಈ ಗೌರವಕ್ಕೆ ಭಾಜನರಾಗಿದ್ದರು.ಇದುವರೆಗೂ 52 ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಈಗಾಗಲೇ ಶಾಂತಿ, ಸಾಹಿತ್ಯ ಕ್ಷೇತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಮೆಡಿಸಿನ್ ವಿಭಾಗದಲ್ಲಿ ನೊಬೆಲ್​ ಪ್ರಶಸ್ತಿ ಪ್ರಕಟಗೊಂಡಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss