ಹೊಸದಿಗಂತ ಆನ್ಲೈನ್ ಡೆಸ್ಕ್:
ವೇತನಕ್ಕಾಗಿ ಆಗ್ರಹಿಸಿ ಕಂಪನಿಯೊಂದರ ಎದುರು ಪ್ರತಿಭಟಿಸಿ, ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ನೌದೀಪ್ ಕೌರ್ಗೆ ಜಾಮೀನು ದೊರೆತಿದೆ.
ಸುಮಾರು ಎರಡು ತಿಂಗಳಿನಿಂದ ನೌದೀಪ್ ಕೌರ್ಗೆ ಶುಕ್ರವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಾಮೀನು ನೀಡಿದೆ.
ನೌದೀಪ್ ಕೌರ್ ಅವರ ವಿರುದ್ಧ ಕೊಲೆ,ಸುಲಿಗೆ, ಕಳ್ಳತನ,ಗಲಭೆ, ಕಾನೂನು ಬಾಹಿರ ಸಭೆ ಮತ್ತು ಕ್ರಿಮಿನಲ್ ಬೆದರಿಕೆಯಂತಹ ಆರೋಪ ಹೊರಿಸಲಾಗಿತ್ತು.
ನೌದೀಪ್ ಕೌರ್ ಅವರು, ಜಾಮೀನು ಅರ್ಜಿಯಲ್ಲಿ ’ನನ್ನನ್ನು ಬಂಧಿಸಿದ ಸೋನಿಪತ್ ಪೊಲೀಸರು ಠಾಣೆಯಲ್ಲಿ ತೀವ್ರವಾಗಿ ಥಳಿಸಿದ್ದಾರೆ. ನನ್ನ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್ಗಳ ಅನ್ವಯ ಎಫ್ಐಆರ್ ಹಾಕಿ ತಪ್ಪಾಗಿ ಬಂಧಿಸಲಾಗಿದೆ ಎಂದು ಉಲ್ಲೇಖಿಸಿದ್ದರು. ಪೊಲೀಸರು ಇದನ್ನು ಆಧಾರ ರಹಿತ ಆರೋಪ ಎಂದು ನಿರಾಕರಿಸಿದ್ದರು. ಇದೀಗ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೌದೀಪ್ಗೆ ಜಾಮೀನು ನೀಡಿದೆ.