ವಸೂಲಾಗದ ಕೆಟ್ಟ ಸಾಲ ಇಳಿಮುಖ, ಸಾಲ ನೀಡಿಕೆ 11 ವರ್ಷಗಳ ದಾಖಲೆಯಲ್ಲೇ ಅಧಿಕ- ಆರ್‌ಬಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ವಾಣಿಜ್ಯ ಬ್ಯಾಂಕುಗಳು ತಮ್ಮ ಸಾಲ ವಿತರಣೆಯಲ್ಲಿ ಕಳೆದ 11 ವರ್ಷಗಳಲ್ಲಿಯೇ ಅಧಿಕ ಪ್ರಮಾಣವನ್ನು ದಾಖಲಿಸಿವೆ. ಬ್ಯಾಂಕುಗಳ ವಸೂಲಾಗದ ಕೆಟ್ಟ ಸಾಲಗಳ ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಸೂಲಾಗದ ಕೆಟ್ಟ ಸಾಲಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು ಶೆಡ್ಯೂಲ್ ವಾಣಿಜ್ಯ ಬ್ಯಾಂಕುಗಳು ಸಾಲ ನೀಡುವಲ್ಲಿ ಜಿಗಿತವನ್ನು ದಾಖಲಿಸಿವೆ. ಇದು ಭಾರತೀಯ ಹಣಕಾಸು ವಲಯವು ಚೇತರಿಸಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ ಎಂದು ಆರ್‌ಬಿಐ ಹೇಳಿದೆ.

2021-22ರ ಎರಡನೇಯ ಭಾಗದಲ್ಲಿ ಭಾರತದ ಬ್ಯಾಂಕುಗಳ ಸಾಲನೀಡುವಿಕೆಯು ಚೇತರಿಸಿಕೊಂಡು ವೇಗಪಡೆದುಕೊಂಡಿದ್ದು ಈ ವರ್ಷವೂ ಕೂಡ ಬೆಳವಣಿಗೆ ಮುಂದುವರೆದು 2022ರ ಡಿಸೆಂಬರ್‌ ನಲ್ಲಿ 17.4ಶೇ. ಏರಿಕೆಯಾಗಿ ದಶಕಗಳಲ್ಲೇ ಅಧಿಕ ಪ್ರಮಾಣವನ್ನು ದಾಖಲಿಸಿದೆ. ಈ ಬೆಳವಣಿಗೆಯು ವಿಸ್ತಾರವಾದ ವ್ಯಾಪ್ತಿಯಲ್ಲಿ ದಾಖಲಾಗಿದೆ ಎಂದು ಆರ್‌ಬಿಐ ಹಣಕಾಸಿನ ಸ್ಥಿರತೆಯ ವರದಿಯಲ್ಲಿ ಹೇಳಿದೆ.

ಬ್ಯಾಂಕಿಂಗ್ ವಲಯದ ಬ್ಯಾಲೆನ್ಸ್ ಶೀಟ್ ಬಲವರ್ಧನೆ, ವಸೂಲಾಗದ ಕೆಟ್ಟ ಸಾಲಗಳಲ್ಲಿನ ಕಡಿತ ಮತ್ತು ಅಪಾಯ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಳಗಳಿಂದಾಗಿ ಭಾರತೀಯ ಹಣಕಾಸು ವಲಯವು ಚೇತರಿಸಿಕೊಳ್ಳುತ್ತಿದೆ. “ತೀವ್ರ ಒತ್ತಡದ ಸನ್ನಿವೇಶದಲ್ಲಿಯೂ ಎಲ್ಲಾ ಬ್ಯಾಂಕುಗಳು ಕನಿಷ್ಠ ಬಂಡವಾಳದ ಅವಶ್ಯಕತೆಗಳನ್ನು ಪೂರೈಸುತ್ತವೆ ಎಂದು ವರದಿ ಸೂಚಿಸಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಣಕಾಸಿನ ಹರಿವಿಗೆ ಸಂಬಂಧಿಸಿ ಆಘಾತಗಳನ್ನು ಎದುರಿಸಬಹುದು. ಆದರೆ ಹೀಗೆ ಒಂದು ಸಂಸ್ಥೆಯಲ್ಲಿ ತಲೆದೋರುವ ಬಿಕ್ಕಟ್ಟು ಉಳಿದ ಹಣಕಾಸು ಸಂಸ್ಥೆಗಳಿಗೂ ಚಾಚಿಕೊಳ್ಳುವ ಸಾಧ್ಯತೆಗಳು ಕಡಿಮೆ ಪ್ರಮಾಣದಲ್ಲಿದೆ” ಎಂದು ಆರ್ಥಿಕ ಸ್ಥಿರತೆಯ ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!