ಮತ್ತೆ ಶುರುವಾದ ಉತ್ತರ ಕೊರಿಯಾ ಉದ್ಧಟತನ: ಗಡಿಯಲ್ಲಿ ಕ್ಷಿಪಣಿ, ಯುದ್ಧ ವಿಮಾನಗಳ ಹಾರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕೊರಿಯಾದಿಂದ ಮತ್ತಷ್ಟು ನಿರ್ಬಂಧಗಳು ಹೆಚ್ಚಾಗುತ್ತಿದ್ದಂತೆ ಉತ್ತರ ಕೊರಿಯಾ ತನ್ನ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಈ ಬಾರಿ ಕ್ಷಿಫನಿ ಜೊತೆಗೆ ಗಡಿಯಲ್ಲಿ ಯುದ್ಧ ವಿಮಾನಗಳನ್ನು ಹಾರಾಟ ನಡೆಸಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ.

ಉತ್ತರ ಕೊರಿಯಾ ಶುಕ್ರವಾರ ತನ್ನ ಪೂರ್ವ ಕರಾವಳಿಯ ಸಮುದ್ರಕ್ಕೆ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದ್ದು, 10 ಉತ್ತರ ಕೊರಿಯಾದ ಮಿಲಿಟರಿ ವಿಮಾನಗಳ ಗುಂಪು ಎರಡು ದೇಶಗಳನ್ನು ವಿಭಜಿಸುವ ಗಡಿಯ ಸಮೀಪದಲ್ಲಿ ಹಾರಾಟ ನಡೆಸಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. ಯುದ್ಧ ವಿಮಾನಗಳ ಮೂಲಕ ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಸುಮಾರು 170 ಫಿರಂಗಿಗಳನ್ನು ಉಡಾಯಿಸಿರುವುದಾಗಿ ದಕ್ಷಿಣ ಕೊರಿಯಾ ಸೇನೆಯ ಜಂಟಿ ಮುಖ್ಯಸ್ಥರು ಸ್ಪಷ್ಟಪಡಿಸಿದರು.

ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಮಂಡಳಿಯು ಉದ್ವಿಗ್ನತೆಯನ್ನು ಹೆಚ್ಚಿಸಿದ್ದ ಉತ್ತರ ಕೊರಿಯಾ ಉದ್ಧಟತನವನ್ನು ಖಂಡಿಸಿದೆ. ಗಡಿ ಪ್ರದೇಶದಲ್ಲಿ ಪ್ರತಿಕೂಲ ಕೃತ್ಯಗಳನ್ನು ನಿಷೇಧಿಸುವ 2018 ರ ದ್ವಿಪಕ್ಷೀಯ ಮಿಲಿಟರಿ ಒಪ್ಪಂದದ ಉಲ್ಲಂಘನೆಯಾಗಿದೆ ಎಂದಿದೆ. ಉತ್ತರ ಕೊರಿಯಾದ ಅಧಿಕೃತ KCNA ಸುದ್ದಿ ಸಂಸ್ಥೆಯು ಗುರುವಾರ ದಕ್ಷಿಣ ಕೊರಿಯಾದ ಫಿರಂಗಿ ಗುಂಡಿನ ಅಭ್ಯಾಸದ ನಂತರ ಉತ್ತರ ಕೊರಿಯಾ ಬಲವಾದ ಮಿಲಿಟರಿ ಚಟುವಟಿಕೆ ಪ್ರಾರಂಭಿಸಿದೆ ಎಂದು ವರದಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!