ಜಪಾನ್ ಮೇಲೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ: ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್ ಮೇಲೆ ಉತ್ತರ ಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದೆ. ಜಪಾನ್ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಜಪಾನ್ ಪ್ರಧಾನಿ ಸೂಚನೆ ನೀಡಿದ್ದಾರೆ. ಉತ್ತರ ಕೊರಿಯಾ ನಮ್ಮ ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಸೂಚನೆಗಳಿವೆ. ಈ ಸಮಯದಲ್ಲಿ ಜನರ ರಕ್ಷಣ ಮುಖ್ಯ, ಹಾಗಾಗಿ ಆದಷ್ಟು ಬೇಗ ಜನರನ್ನು ಸುರಕ್ಷಿತ ಶೆಲ್ಟರ್‌ಗಳಿಗೆ ಸ್ಥಳಾಂತರಿಸಿ ಎಂದು ಜಪಾನ್ ಸರ್ಕಾರ ಅಧಿಕಾರಿಗಳಿಗೆ ಆದೇಶ ನೀಡಿದೆ.

ಜಪಾನ್‌ನ ಉತ್ತರ ಭಾಗದ ಎರಡು ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಪ್ರಧಾನಿ ಎಚ್ಚರಿಕೆ ನೀಡಿದ್ದು, ಉತ್ತರ ಕೊರಿಯಾ ಕ್ಷಿಪಣಿಯನ್ನು ಉಡಾಯಿಸಿದಂತೆ ತೋರುತ್ತಿದೆ. ದಯವಿಟ್ಟು ಜನರನ್ನು ಕಟ್ಟಡಗಳು ಅಥವಾ ಭೂಗತಕ್ಕೆ ಸ್ಥಳಾಂತರಿಸಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!