ಹೊಸದಿಗಂತ ಡಿಜಿಟಲ್ ಡೆಸ್ಕ್ :
ಉತ್ತರ ಕೊರಿಯಾ ಸೋಮವಾರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿತು ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. 48 ಗಂಟೆಗಳಲ್ಲಿ ಎರಡನೇ ಪ್ರಯೋಗ ಇದಾಗಿದೆ.
ಉತ್ತರ ಕೊರಿಯಾ ಸೋಮವಾರ ಪೂರ್ವ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿದ್ದಾರೆ.
395 ಕಿಮೀ ಮತ್ತು 337 ಕಿಮೀ ದೂರದ ಗುರಿಗಳ ಮೇಲೆ ಎರಡು ಸ್ಪೋಟಕಗಳನ್ನು ಹಾರಿಸಿರುವುದಾಗಿ ಉತ್ತರ ಕೊರಿಯಾ ಹೇಳಿದೆ. B-1B ಸ್ಟ್ರಾಟೆಜಿಕ್ ಪಾಲುದಾರಿಕೆಯ ಭಾಗವಾಗಿ ಯುಎಸ್ ಮತ್ತು ದಕ್ಷಿಣ ಕೊರಿಯಾ ಭಾನುವಾರ ಜಂಟಿ ಏರ್ ಡ್ರಿಲ್ಗಳನ್ನು ನಡೆಸಿದ ಒಂದು ದಿನದ ನಂತರ ಉತ್ತರ ಕೊರಿಯಾ ಪರೀಕ್ಷೆ ನಡೆಸಿದೆ.