ಕೊರೊನಾ ಪ್ರಕರಣಗಳಿಲ್ಲ ಅಂತಲೇ ರಾಜಧಾನಿಯಲ್ಲಿ ʻಲಾಕ್‌ಡೌನ್‌ʼ ವಿಧಿಸಿದ ಕಿಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಕೊರಿಯಾದಲ್ಲಿ ಕೊರೊನಾ ಪ್ರಕರಣಗಳಿಲ್ಲ ಎಂದು ಹೇಳುತ್ತಲೇ ಕಿಮ್‌ ಸರ್ಕಾರ ರಾಜಧಾನಿಯಲ್ಲಿ 5 ದಿನಗಳ ಲಾಕ್‌ಡೌನ್ ಅನ್ನು ವಿಧಿಸಿದೆ. ಉಸಿರಾಟದ ಕಾಯಿಲೆಗೆ ಬಲಿಯಾದವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಲಾಕ್‌ಡೌನ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನರು ತಮ್ಮ ಮನೆಗಳಿಗೆ ಸೀಮಿತವಾಗಿರಲು ಮತ್ತು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಇದು ಕರೋನಾದಿಂದಲ್ಲ ಆದರೆ ಉಸಿರಾಟದ ಕಾಯಿಲೆಯ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಲಾಕ್‌ಡೌನ್‌ ಮಾಡಲಾಗುತ್ತಿದೆ ಎಂದಿದೆ. ಆದರೆ ಉತ್ತರ ಕೊರಿಯಾ ಸರ್ಕಾರ ಹೇಳುವುದೆಲ್ಲ ಸುಳ್ಳು ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಲಾಕ್‌ಡೌನ್ ಹೇರಲಾಗಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಇಡೀ ವಿಶ್ವವೇ ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ಗೆ ಕೊರೊನಾ ಸೋಂಕು ತಗುಲಿಲ್ಲ. ಔಷಧಿ ಇಲ್ಲ..ಮಾಸ್ಕ್ ಬೇಕಿಲ್ಲ ಎಂದು ಬಡಾಯಿ ಕೊಚ್ಚಿಕೊಂಡರು. ಇದೀಗ ಕೋವಿಡ್ ಉತ್ತರ ಕೊರಿಯಾಕ್ಕೂ ಪ್ರವೇಶಿಸಿದೆ. ಕಿಮ್‌ಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಬಂದಿತ್ತು. ಸಾಮಾನ್ಯವಾಗಿ ತನ್ನ ಆರೋಗ್ಯ ಸಮಸ್ಯೆಗಳು ಹೊರಬರಲು ಬಿಡದ ಕಿಮ್, ಹಲವು ದಿನಗಳ ಕಾಲ ಕಣ್ಣಿಗೆ ಬೀಳದೆ ಚಿಕಿತ್ಸೆಗೆ ಒಳಗಾಗಿದ್ದರು ಎಂಬ ವರದಿಗಳಿವೆ.

ಏತನ್ಮಧ್ಯೆ, ಉತ್ತರ ಕೊರಿಯಾದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಹೇರಿದ ಕಾರಣ, ಕರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಸುದ್ದಿ ಇದೆ. ಆದರೆ ಎಂದಿನಂತೆ, ಉತ್ತರ ಕೊರಿಯಾ ಲಾಕ್‌ಡೌನ್ ಅನ್ನು ಹೇರಿದ್ದು ಕರೋನಾ ಕಾರಣದಿಂದಲ್ಲ, ಉಸಿರಾಟದ ತೊಂದರೆಯಿಂದಾಗಿ ಎಂದು ಸಿಯೋಲ್ (ದಕ್ಷಿಣ ಕೊರಿಯಾದ ರಾಜಧಾನಿ) ಮೂಲದ ಉತ್ತರ ಕೊರಿಯಾದ ಪತ್ರಿಕೆಯು ಬುಧವಾರ (ಜನವರಿ 24, 2023) ಪಯೋಂಗ್ಯಾಂಗ್‌ನಲ್ಲಿ ಸರ್ಕಾರದ ಸೂಚನೆ ಸೇರಿದಂತೆ ಲಾಕ್‌ಡೌನ್ ಹೇರಿರುವುದನ್ನು ಪ್ರಕಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!