ತನ್ನ ಮಗಳ ಹೆಸರನ್ನು ಯಾರೂ ಇಟ್ಟುಕೊಳ್ಳದಂತೆ ಕಿಮ್ ಆದೇಶ!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್-ಉನ್ ನಿರ್ಧಾರ, ಕ್ರಮಗಳು ಎಲ್ಲವೂ ಚಿತ್ರ ವಿಚಿತ್ರವಾಗಿರುತ್ತವೆ. ಜನರು ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಮತ್ತು ಅಂತಿಮವಾಗಿ ಅವರು ಯಾವ ಹೇರ್ ಸ್ಟೈಲ್‌ಗಳನ್ನು ಧರಿಸಬೇಕು ಎಂದು ಹೇಳುವ ಸರ್ವಾಧಿಕಾರಿ ಧೋರಣೆ.

ಅಣುಬಾಂಬ್ ತಯಾರಿಸಿ, ಕ್ಷಿಪಣಿ ಉಡಾವಣೆ ಮಾಡಿ ಶತ್ರು ರಾಷ್ಟ್ರಗಳಿಗೆ ಕಿರುಕುಳ ನೀಡುತ್ತಿರುವ ಕಿಮ್, ಇತ್ತೀಚೆಗಷ್ಟೇ ತನ್ನ ದೇಶದ ಜನತೆಗೆ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ತಮ್ಮ ಪ್ರೀತಿಯ ಮಗಳು  ‘ಜು-ಏ’ ಹೆಸರನ್ನು ಯಾರೂ ಇಡಬಾರದು ಎಂದು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಆ ಹೆಸರನ್ನು ಇಟ್ಟಿದ್ದರೆ ಜನ್ಮ ಪ್ರಮಾಣ ಪತ್ರಗಳು ಮತ್ತು ಇತರ ಪ್ರಮಾಣಪತ್ರಗಳಲ್ಲಿ ಹೆಸರನ್ನು ಬದಲಾಯಿಸುವಂತೆ ಆದೇಶಿಸಲಾಗಿದೆ.

ಅಣುಬಾಂಬ್ ತಯಾರಿಸಿ, ಕ್ಷಿಪಣಿ ಉಡಾವಣೆ ಮಾಡಿ ಸುದ್ದಿಯಲ್ಲಿರುವ ಕಿಮ್, ಮಗಳ ಜೊತೆ ಕಾಣಿಸಿಕೊಂಡು ಜಗತ್ತಿನಾದ್ಯಂತ ಹಾಟ್ ಟಾಪಿಕ್ ಆಗಿದ್ದಾರೆ. ಇತ್ತೀಚೆಗೆ, ಕಿಮ್ ತನ್ನ ಪ್ರೀತಿಯ ಮಗಳ ಹೆಸರನ್ನು ದೇಶದಲ್ಲಿ ಯಾರೂ ಹೊಂದಿರಬಾರದು ಎಂದು ಆದೇಶ ಹೊರಡಿಸಿದ್ದಾರೆ. ಕಿಮ್ ಅವರ ಮಗಳ ಹೆಸರು ‘ಕಿಮ್ ಜು-ಏ’ (‘ಜು-ಏ’). ಏಕೆಂದರೆ ಅವರ ಮುದ್ದು ಮಗಳೇ ಉತ್ತರ ಕೊರಿಯಾದ ಭವಿಷ್ಯದ ನಾಯಕಿ ಎಂಬ ಪ್ರಚಾರವೂ ಶುರುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!